ವಿಟ್ಲ : ಓಂ ಫ್ರೆಂಡ್ಸ್ ಮುಳಿಯ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 2ನೇ ವರ್ಷದ ‘ಓಂ ಫ್ರೆಂಡ್ಸ್ ಮುಳಿಯ ಟ್ರೋಫಿ-2024’ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ-2024 ಜ.26 ರಂದು ಅಳಿಕೆ ಗ್ರಾಮದ ಮುಳಿಯ ಆವರಣದಲ್ಲಿ ನಡೆಯಲಿದೆ.
ಪ್ರವೇಶ ಶುಲ್ಕ 700 ರೂ. ಆಗಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 15,555 ರೂ. ಮತ್ತು ಓಂ ಫ್ರೆಂಡ್ಸ್ ಟ್ರೋಫಿ, ದ್ವಿತೀಯ ಬಹುಮಾನವಾಗಿ 9,999 ಮತ್ತು ಓಂ ಫ್ರೆಂಡ್ಸ್ ಟ್ರೋಫಿ, ತೃತೀಯ ಬಹುಮಾನವಾಗಿ 4,444 ಮತ್ತು ಓಂ ಫ್ರೆಂಡ್ಸ್ ಟ್ರೋಫಿ ಹಾಗೂ ಚತುರ್ಥ ಬಹುಮಾನವಾಗಿ 4,444 ಮತ್ತು ಓಂ ಫ್ರೆಂಡ್ಸ್ ಟ್ರೋಫಿ ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಫಲಕ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























