ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.16ರ ವರೆಗೆ ಕಿರುಷಷ್ಠಿ ಮಹೋತ್ಸವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.12 ರಂದು ಸಾಯಂಕಾಲ ಶ್ರೀ ಕಾರ್ತಿಕ ವೇದಿಕೆಯಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಮ ಎಸ್. ಸುಳ್ಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಧಾರ್ಮಿಕ ಸಭೆ
ಜ.16 ರಂದು ಪೂರ್ವಾಹ್ನ ದೇವಾಲಯ ಆಡಳಿತ ಧರ್ಮದರ್ಶಿಗಳ ಚಿಂತನ ಸಭೆ ಗುಡಿ-ಜನರ ಜೀವನಾಡಿ ಶ್ರೀ ಕಾರ್ತಿಕ ವೇದಿಕೆಯಲ್ಲಿ ನಡೆಯಲಿದೆ.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನ ಸಮಿತಿ ಸಂಯೋಜಕ ಮನೋಹರ ಮಠದ್ ಉಪನ್ಯಾಸ ನೀಡಲಿದ್ದಾರೆ.
ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಉಪಸ್ಥಿತರಿರುವರು.
ಸಂಜೆ 6 ರಿಂದ ದೇವರ ರಥೋತ್ಸವ ನಡೆಯಲಿದೆ.

























