ಉಪ್ಪಿನಂಗಡಿ : ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ದಿ. ರಾಜು ಮೇಸ್ತ್ರಿಯವರ ಕನಸಿನ ಕೂಸಾದ ಈ ಸಂಸ್ಥೆಗೆ ಈಗ 36ರ ಹರೆಯ, ಪುಟ್ಟ-ಪುಟ್ಟ ಹೆಜ್ಜೆಗಳನ್ನಿಡುತ್ತಾ ಬೆಳೆದು ನಾಡಿನ ಜನರ ವಿಶ್ವಾಸನೀಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಂಸ್ಥೆಯ ಸಾಧನೆಯ ಹಿರಿಮೆಗೆ ಮತ್ತೊಂದು ಗರಿ ಎಂಬಂತೆ ಇದೀಗ ಮೂಡಿ ಬಂದಿರುವ ನೂತನ ಸಹ ಸಂಸ್ಥೆ ‘ಕನಸಿನ ಮನೆ’ ಉಪ್ಪಿನಂಗಡಿಯಲ್ಲಿ ಅನಾವರಣಗೊಳ್ಳುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಉಪ್ಪಿನಂಗಡಿಯ ಬಿ.ಎಮ್. ಆರ್ಕೆಡ್ ನಲ್ಲಿ ಆರಂಭವಾಗಲಿರುವ ಕೆ. ಮೋಹನ್ ಕುಮಾರ್ ಮಾಲಕತ್ವದ ಲಕ್ಷ್ಮೀ ಇಂಡಸ್ಟ್ರೀಸ್ ನ ‘ಕನಸಿನ ಮನೆ’ಯ ಪ್ರಾರಂಭೋತ್ಸವ ಜ.14 ರಂದು ಬೆಳಿಗ್ಗೆ ನಡೆಯಲಿದೆ.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ ಸಿಂಹ ನಾಯಕ್, ಪುತ್ತೂರು ಕೌಶಲ್ ಕನ್ಸ್ಟ್ರಕ್ಷನ್ ನ ಮಾಲಕ ನವೀನ್ ಕುಮಾರ್ ಮತ್ತು ಉಪ್ಪಿನಂಗಡಿ ಬಿ.ಕೆ. ಕನ್ಸ್ಟ್ರಕ್ಷನ್ ಮಾಲಕ ಬಿ.ಕೆ. ಸುಲೈಮಾನ್ ಭಾಗವಹಿಸಲಿದ್ದಾರೆ.
ನೂತನ ತಂತ್ರಜ್ಞಾನ ಆಕರ್ಷಕ ವಿನ್ಯಾಸಗಳೊಂದಿಗೆ ನಿಮ್ಮ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡುವ ಉತ್ಪನ್ನಗಳಾದ ಸಿಮೆಂಟ್-ಫೈಬರ್-ಸ್ಟೀಲ್ ನ ದಾರಂದ, ಕಿಟಕಿ ಫ್ರೇಮ್, ಬಾಗಿಲು, ಡಬ್ಲ್ಯು, ಪಿ.ಸಿ. ಡೋರ್ ಫ್ರೇಮ್, ವಿಂಡೋಸ್ ಫ್ರೇಮ್ ಗಳು ಆಲ್ಯುಮಿನಿಯಂ ಬಾತ್ ರೂಮ್ ಡೋರ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

























