ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಗುಡಿಯ ಮಾಜಿ ಅರ್ಚಕ, ಸುಳ್ಯ ತಾಲೂಕಿನ ಕಲ್ಮಡ್ಕ ಎಡಕ್ಕಾನ ಗಣಪತಿ ಭಟ್ (79) ನಿಧನರಾದರು.

ಮೂಲತ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಎಡಕ್ಕಾನ ನಿವಾಸಿಯಾಗಿರುವ ಗಣಪತಿ ಭಟ್ ಅವರು ಹಲವು ವರ್ಷಗಳ ಕಾಲ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಅಯ್ಯಪ್ಪ ಗುಡಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಇತ್ತಿಚೆಗೆ ಅಲ್ಪಕಾಲದ ಅಸೌಖ್ಯದಿಂದ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತರು ಪತ್ನಿ ಲಕ್ಷ್ಮೀ ಭಟ್, ಪುತ್ರ ಉದ್ಯಮಿ ರಾಜಾರಾಮ್ ಭಟ್ ಎಡಕ್ಕಾನ, ಪುತ್ರಿಯರಾದ ಸಂಧ್ಯಾ ಗಣಪತಿ ಭಟ್ ಹಾಗೂ ಗೀತಾ ಗಣಪತಿ ಭಟ್ ರನ್ನು ಅಗಲಿದ್ದಾರೆ.


























