ಕಾಂತಾರ ಬೆಡಗಿ ಸಪ್ತಮಿ ಗೌಡ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ತಮ್ಮುಡು ಸಿನಿಮಾದ ಮೂಲಕ ಸಪ್ತಮಿ ತೆಲುಗು ಸಿನಿಮಾ ರಂಗವನ್ನು ಪ್ರವೇಶಿಸಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ.
ಸದ್ಯ ಯುವರಾಜ್ ಕುಮಾರ್ ನಟನೆಯ ಯುವ ಚಿತ್ರದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಹಿಂದಿಯಲ್ಲಿ ವ್ಯಾಕ್ಸಿನ್ ವಾರ್ ಎನ್ನುವ ಸಿನಿಮಾ ಮಾಡಿದ್ದರು. ಈಗ ಟಾಲಿವುಡ್ನತ್ತ ಮುಖ ಮಾಡಿದ್ದಾರೆ ಸಪ್ತಮಿ ಗೌಡ.,ಕಾಂತಾರ ಬಳಿಕ ಸಪ್ತಮಿ ಗೌಡ ದಿಕ್ಕು ದೆಸೆ ಬದಲಾಗಿದ್ದು, ತೆಲುಗು ಚಿತ್ರ ಅವರನ್ನು ಬರಮಾಡಿಕೊಂಡಿದೆ.
ಇದೀಗ ಸ್ಯಾಂಡಲ್ವುಡ್ನ ಮುದ್ದು ಮುಖದ ಚೆಲುವೆ ಟಾಲಿವುಡ್ ಆಫರ್ ಅನ್ನು ಒಪ್ಪಿಕೊಂಡಿದ್ದಾರೆ.


























