ಕಡಬ : ಹುಲ್ಲು ತೆಗೆಯುವ ಮೆಷಿನ್ ಎಳೆದೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಗಂಗಾಧರ ಎಂಬವರು ಠಾಣೆಗೆ ದೂರು ನೀಡಿದವರು.
ತಾನು ಮನೆ ಎದುರು ಕಳೆ ಹುಲ್ಲು ತೆಗೆಯುತ್ತಿದ್ದ ವೇಳೆ ಅಣ್ಣ ವಸಂತ ಎಂಬವರು ತಕರಾರು ತೆಗೆದು ಕೈಯಲ್ಲಿದ್ದ ಮೆಷಿನ್ ಎಳೆದುಕೊಂಡು ನನಗೆ ಹಾಗೂ ನನ್ನ ಪತ್ನಿಗೂ ಹಲ್ಲೆ ನಡೆಸಿದ್ದಲ್ಲದೆ, ಅತ್ತಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

























