ಪಂಜಾಬ್ : ವೇಷ ಬದಲಿಸಿ ನಕಲಿ ಪಾಸ್ಪೋರ್ಟ್ ಪಡೆದು ದೇಶ ತೊರೆಯುವವರ ಮಧ್ಯೆ ಗರ್ಲ್ಫ್ರೆಂಡ್ ರೀತಿ ವೇಷ ಬದಲಿಸಿ ಪರೀಕ್ಷೆ ಬರೆಯಲು ಬಂದ ಹಾಸ್ಯಾಸ್ಪದ ಘಟನೆ ಪಂಜಾಬ್ನಲ್ಲಿ ನಡೆದಿದೆ.
ರೀದ್‌ಕೋಟ್‌ನಲ್ಲಿರುವ ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ.
22 ವರ್ಷದ ಅಂಗ್ರೇಜ್ ಸಿಂಗ್ ಎಂಬ ವ್ಯಕ್ತಿ ತನ್ನ ಗೆಳತಿಯಂತೆ ವೇಷ ಬದಲಾಯಿಸಿಕೊಂಡು ಬಂದು ಪರೀಕ್ಷೆ ಬರೆಯಲು ಯತ್ನಿಸಿದ್ದಾನೆ. ತನ್ನ ಗೆಳತಿ ಪರಮ್ಜಿತ್ ಕೌರ್ ರೀತಿಯಲ್ಲಿಯೇ ಬಳೆ ತೊಟ್ಟು, ಹಣೆಗೆ ಬಿಂದಿಗೆಯನ್ನಿಟ್ಟು ಬಂದಿದ್ದನು. ಆದರೆ ಈ ವೇಳೆ ಪರೀಕ್ಷೆ ನಡೆಸುತ್ತಿದ್ದ ಸಿಬ್ಬಂದಿಯ ಬಳಿ ತಗ್ಲಾಕ್ಕೊಂಡಿದ್ದಾನೆ.
ಅಂಗ್ರೇಜ್ ಸಿಂಗ್ನನ್ನು ಬಯೋಮೆಟ್ರಿಕ್ ಸಾಧನದ ಸಹಾಯದಿಂದ ಆತನ ಆಧಾರ್ ಕಾರ್ಡ್ ಮತ್ತು ಮತದಾರರ ಚೀಟಿ ನಕಲಿ ಎಂದು ಪತ್ತೆಹಚ್ಚಲಾಗಿದೆ. ತಕ್ಷಣವೇ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಅಂಗ್ರೇಜ್ ಸಿಂಗ್ ಹಿಂದೆ ದೊಡ್ಡ ಜಾಲವಿರುವ ಸಾಧ್ಯತೆ ಎಂದು ಶಂಕಿಸಿದೆ.
ಅಂಗ್ರೇಜ್ ಸಿಂಗ್ ಫಜಿಲ್ಕಾ ನಿವಾಸಿ ಪರಮ್ಜಿತ್ ಕೌರ್ ಎಂದು ಗುರುತಿಸಲಾದ ಹುಡುಗಿಯ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿದ ದೂರಿನ ಮೇಲೆ ಪೊಲೀಸರು ಅಂಗ್ರೇಜ್ ಸಿಂಗ್ನನ್ನು ಬಂಧಿಸಿದ್ದಾರೆ. ಸದ್ಯ ಆತನ ವಿರುದ್ಧ ತನಿಖೆ ನಡೆಯುತ್ತಿದೆ.

























