ಪುತ್ತೂರು : ಜಮೀನಿನ ತಂತಿ ಬೇಲಿ ವಿಚಾರವಾಗಿ ವಾಗ್ವಾದ ನಡೆದು ಅವಾಚ್ಯವಾಗಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಹಾಕಿರುವ ಕುರಿತು ಇತ್ತಂಡಗಳು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮುಂಡೂರು ನಿವಾಸಿ ಸಂತೋಷ್ ಬಿ.ಕೆ ಎಂಬವರು ನೀಡಿರುವ ದೂರಿನ ಮೇರೆಗೆ ಕೇಶವ, ಧನಂಜಯ, ಜಗದೀಶ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತೋಷ್ ನೀಡಿದ ದೂರಿನಲ್ಲೇನಿದೆ..!?
ಸಂತೋಷ್ ಜ.15 ರಂದು ರಾತ್ರಿ ಆಕ್ಟಿವಾ ಸ್ಕೂಟರ್ ನಲ್ಲಿ ತಮ್ಮ ತೋಟದ ಹತ್ತಿರ ಬಂದು ವಾಹನ ನಿಲ್ಲಿಸಿ, ಅಲ್ಲಿಂದ ತಮ್ಮ ತೋಟದಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಕೇಶವ, ಧನಂಜಯ, ಜಗದೀಶ್ ಬಂದು ತಡೆದು ನಿಲ್ಲಿಸಿ, ಹಲ್ಲೆ ನಡೆಸಿರುತ್ತಾರೆ. ಗಲಾಟೆಯ ಶಬ್ದ ಕೇಳಿ ಸಂತೋಷ್ ರವರ ತಾಯಿ ಸ್ಥಳಕ್ಕೆ ಬಂದಾಗ ಕೇಶವ ಎಂಬಾತನು ಸವಿತಾ ರವರಿಗೂ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಲಾಟೆಯ ವೇಳೆ ಸಂತೋಷ್ ರವರ ಮೊಬೈಲ್ ಮತ್ತು 25 ಸಾವಿರ ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಕ್ರ 07-2024 ಕಲಂ: IPC1860 (U/s.341,447,323,324,506,34) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇನ್ನೊಂದು ತಂಡದಿಂದಲೂ ದೂರು..!
ಮುಂಡೂರು ನಿವಾಸಿ ಕೇಶವ ನಾಯ್ಕ್ ನೀಡಿದ ದೂರಿನಂತೆ ಸಂದೀಪ್ ಮತ್ತು ಸಂತೋಷ್ ರವರ ಪತ್ನಿಯರ ಮೇಲೆ ಹಾಗೂ ಸಂತೋಷ್ , ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಶವ ನಾಯ್ಕ್ ನೀಡಿದ ದೂರಿನಲ್ಲೇನಿದೆ..!?
ಜ.15 ರಂದು ರಾತ್ರಿ ಸಂದೀಪ ಮತ್ತು ಸಂತೋಷ ರವರ ಪತ್ನಿಯರು ಕೇಶವ ನಾಯ್ಕ್ ರವರ ಜಮೀನಿನ ತಂತಿ ಬೇಲಿಯನ್ನು ಕಿತ್ತಿ ಹಾಕಲು ಪ್ರಾರಂಭಿಸಿದ್ದು, ಈ ಬಗ್ಗೆ ಕೇಳಿದಾಗ ಕೇಶವ ನಾಯ್ಕ್ ರವರಿಗೆ ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಹಾಕಿದ್ದು, ಅಲ್ಲೇ ಇದ್ದ ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾ ಕೂಡಾ ಅವ್ಯಾಚವಾಗಿ ಬೈದಿರುತ್ತಾರೆ.
ಈ ಬಗ್ಗೆ ದೂರು ನೀಡಲು ಕೇಶವ ನಾಯ್ಕ್ ರವರು ಚಿಕ್ಕಪ್ಪನ ಮಗ ಧನಂಜಯರ ಜೊತೆಗೆ ತೆರಳುತ್ತಿದ್ದಾಗ ಕೊರಗಪ್ಪ ನಾಯ್ಕ್ ರವರ ಮಗ ಸಂತೋಷ ಕೇಶವ ರವರ ತಲೆಗೆ ಹೆಲ್ಮೇಟ್ ನಿಂದ ಹಲ್ಲೆ ನಡೆಸಿದ್ದು, ಗಲಾಟೆಯ ಶಬ್ದ ಕೇಳಿ ಕೇಶವ ರವರ ತಾಯಿ ಸ್ಥಳಕ್ಕೆ ಬಂದಿದ್ದು, ಅವರಿಗೂ ಸಂತೋಷ ಮತ್ತು ಇನ್ನಿತರರು ಹಲ್ಲೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 08-2024 ಕಲಂ: IPC1860 (U/s. ಐಪಿಸಿ 1860 (U/s-323,324,504,506,34) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























