ಬೆಳ್ತಂಗಡಿ : ಆ್ಯಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಕಮಿಷನ್ ಪಡೆಯುವಂತೆ ಆಸೆ ತೋರಿಸಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ್ (26) ಹಣ ಕಳೆದುಕೊಂಡ ಯುವಕ.
ಸುರೇಶ್ ನಾಯ್ಕ ರವರಿಗೆ ಜ.4 ರಂದು ಟೆಲಿಗ್ರಾಮ್ ಆ್ಯಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಕಮೀಷನ್ ಪಡೆಯುವಂತೆ ಲಿಂಕ್ ಮತ್ತು ಮೇಸೆಜ್ ಬಂದಿದ್ದು, ಅದರಂತೆ ಸುರೇಶ್ ತಮ್ಮ ಖಾತೆ ವಿವರ ಮತ್ತು ಮೊಬೈಲ್ ನಂಬ್ರಗಳನ್ನು ನೀಡಿರುತ್ತಾರೆ. ಬಳಿಕ ಜ.4 ರಿಂದ 15ರ ವರೆಗೆ ಒಟ್ಟು 3,46,799 ರೂ. ಹಣವನ್ನು ಅಪರಿಚಿತ ಖಾತೆಗೆ ಕಮೀಷನ್ ಪಡೆಯುವ ಉದ್ದೇಶದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಅಪರಿಚಿತ ಆರೋಪಿಗಳು ಸುರೇಶ್ ರವರಿಂದ ಬಾಬ್ತು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಯಾವುದೇ ಕಮೀಷನ್ ನೀಡದೇ ಹಾಗೂ ವರ್ಗಾಯಿಸಿಕೊಂಡ ಹಣವನ್ನೂ ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 02/2024 ಕಲಂ; 419,420 ಐಪಿಸಿ , & 66(D) IT ಆಕ್ಟ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























