ಉತ್ತರ ಕನ್ನಡ : ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ.
ಪ್ರವಾಸಿಗರು ಬೋಟಿನಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ಕಾಣಿಸಿಕೊಂಡಿವೆ. ಹತ್ತಿರದಲ್ಲೇ ತಿಮಿಂಗಿಲಗಳು ಒಂದರ ಹಿಂದೆ ಒಂದು ಸಾಗುವುದು ಕಂಡು ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ.
ಇನ್ನು ಕೆಲವರು ತಿಮಿಂಗಿಲಗಳು ದೂರ ಹೋದದ್ದನ್ನು ನೋಡಿ ನಿಟ್ಟುಸಿರುಬಿಟ್ಟಿದ್ದಾರೆ. ಸ್ಕೂಬಾ ಡೈವ್ ಸಿಬ್ಬಂದಿ ತಿಮಿಂಗಿಲಗಳು ಓಡಾಡುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.


























