ಪುತ್ತೂರು: ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಪುತ್ತೂರು ನಗರ ಪ್ರದೇಶದಲ್ಲಿರುವ ನಿರಾಶ್ರಿತರಿಗೆ ಮೇ.21ರಂದು ಮಧ್ಯಾಹ್ನ ಭೋಜನವನ್ನು ಒದಗಿಸಿದರು.
ನೆಲ್ಲಿಕಟ್ಟೆ ನಿರ್ಗತಿಕರ ಕೇಂದ್ರ, ಜಾತ್ರಾ ಗದ್ದೆಯಲ್ಲಿರುವ ಜಾಯಿಂಟ್ ವ್ಹೀಲ್ ಕುಟುಂಬಗಳು ಸೇರಿದಂತೆ ನಗರದಲ್ಲಿರುವ ಸುಮಾರು 60 ಮಂದಿ ನಿರಾಶ್ರಿತರಿಗೆ ಊಟವನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಸಂಘಟನೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಚಾಲಕ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾವ್ ಕೆ.ಬಿ., ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಸಭಾ ಸದಸ್ಯ ರಿಯಾಝ್, ಯಂಗ್ ಬ್ರಿಗೇಡ್ ನ ಅಧ್ಯಕ್ಷ ರಂಜಿತ್ ಬಂಗೇರ, ಪ್ರಮುಖರಾದ ಪೂರ್ಣೇಶ್ ಕುಮಾರ್, ಅಭಿಷೇಕ್, ಶರೀಫ್ ಬಲ್ನಾಡು, ಅಶೋಕ್, ನವೀನ್ ದಾಸ್, ರಾಜೀವ ಗೌಡ, ಅಬೀಬ್ ಕಣ್ಣೂರು ಹಾಗೂ ಮೆಲ್ವಿನ್ ಮೋಂತೆರೋ ಉಪಸ್ಥಿತರಿದ್ದರು.