ಮಧ್ಯಪ್ರದೇಶ : ಭೋಪಾಲ್ನಲ್ಲಿ ನಡೆದ ಮದುವೆಯೊಂದು ಸಾಕಷ್ಟು ಚರ್ಚೆಯಲ್ಲಿದೆ. 2023ರಲ್ಲಿ ನಡೆದ ಮದುವೆ ಇದಾಗಿದ್ದು, ಅದರ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ಹಬೀಬ್ ನಜರ್, ಫಿರೋಜ್ ಜಹಾನ್ ಮದುವೆಯಾದವರು.
ಕಾರಣ ಇಷ್ಟೇ, ವರನ ವಯಸ್ಸು 103, ವಧುವಿಗೆ 49 ವರ್ಷ. 103 ವರ್ಷದ ಅಜ್ಜ 49 ವರ್ಷದ ಮಹಿಳೆಯನ್ನು ವರಿಸುವ ಮೂಲಕ ಸತಿ-ಪತಿಗಳಾಗಿದ್ದಾರೆ.
ನಜರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಇವರಿಗೆ ಇದು ಮೂರನೇ ಮದುವೆ ಆಗಿದೆ.


























