ವಿಟ್ಲ : ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಂತಾಡಿ ಬಾಬನಕಟ್ಟೆ ನಿವಾಸಿ ತಿರುಮಲೇಶ್ವರ ಎಂಬವರು ನೀಡಿರುವ ದೂರಿನ ಮೇರೆಗೆ ಸೋಮಶೇಖರ, ರಾಧಾಕೃಷ್ಣ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಿರುಮಲೇಶ್ವರ ಅವರು ಅನಂತಾಡಿ ಗ್ರಾಮದ ಕೊಂಗಲಾಯಿ ಎಂಬಲ್ಲಿ ಹೊಸ ಮನೆ ನಿರ್ಮಾಣಕ್ಕೆ ಮಾಡಿರುವ ಅಡಿಪಾಯವನ್ನು ಜ.28 ರಂದು ಸೋಮಶೇಖರ ಹಾಗೂ ರಾಧಾಕೃಷ್ಣ ಎಂಬವರು ನೆಲಸಮ ಮಾಡಿ ರಸ್ತೆಯನ್ನು ಮಾಡಿದ ಬಗ್ಗೆ, ರಾತ್ರಿ ವಿಚಾರಿಸಿದ್ದು, ಆಗ ಸೋಮಶೇಖರ ಹಾಗೂ ರಾಧಾಕೃಷ್ಣ ಗಲಾಟೆ ಮಾಡಿರುತ್ತಾರೆ.
ಈ ಬಗ್ಗೆ ಜ.29 ರಂದು ಬೆಳಿಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಮಧ್ಯಾಹ್ನ ವೇಳೆಗೆ ತನ್ನ ಮನೆಗೆ ಮಧ್ಯಾಹ್ನ ಹಿಂತಿರುಗಿದಾಗ ಸೋಮಶೇಖರ ಹಾಗೂ ರಾಧಾಕೃಷ್ಣ ವಿರುದ್ದ ದೂರು ನೀಡಿರುವ ವಿಚಾರವನ್ನು ತಿಳಿದುಕೊಂಡು ಅವಾಚ್ಯವಾಗಿ ಬೈಯ್ದು , ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2024 ಕಲಂ: 504,323,324,506 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























