ಬೆಳ್ಳಾರೆ : ಹಣ ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಸೊತ್ತುಗಳ ಸಹಿತ ಆರು ಮಂದಿಯನ್ನು ವಶಕ್ಕೆ ಪಡೆದ ಘಟನೆ ಕಳಂಜ ಗ್ರಾಮದ ಕಳಂಜ ಮಾಡದಗುಡ್ಡೆ ಎಂಬಲ್ಲಿ ನಡೆದಿದೆ.
ಜ.31 ರಂದು ಕಳಂಜ ಗ್ರಾಮದ ಕಳಂಜ ಮಾಡದ ಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿದ್ದಾಗ ದಾಳಿ ನಡೆಸಿದ ಬೆಳ್ಳಾರೆ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ಹಾಗೂ ಸಿಬ್ಬಂದಿಗಳು, ಕೃತ್ಯದಲ್ಲಿ ತೊಡಗಿದ್ದ ತಾರನಾಥ, ಐತ್ತ, ಹರೀಶ್, ಕೌಶಿಕ್, ಸುನಿಲ್, ಸುಧೀರ ಎಂಬವರುಗಳನ್ನು ವಶಕ್ಕೆ ಪಡೆದು, ಜೂಜಿಗೆ ಬಳಸಿದ ನಗದು ಹಣ ರೂ 1,300/-, ಅಂಕದ ಕೋಳಿಗಳು -8, ಕೋಳಿಯ ಕಾಲುಗಳಿಗೆ ಕಟ್ಟಿದ್ದ ಕತ್ತಿ -4 ಹಾಗೂ ಸ್ಥಳದಲ್ಲಿದ್ದ 9 ಮೊಟಾರು ಸೈಕಲ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ :14/2024, ಕಲಂ : 87 ಕರ್ನಾಟಕ ಪೊಲೀಸ್ ಕಾಯ್ದೆ.11 Prevention of Cruelty to Animal Act 1960 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























