ಪುತ್ತೂರು : 2023 – 24 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ರಾಜ್ಯ ಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ಕಬ್ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳಾದ ಆರ್ಯನ್. ಕೆ (ಅರುಣ್ ಬಿ. ಕೆ ಹಾಗೂ ರೇಷ್ಮಾ ದಂಪತಿಯ ಪುತ್ರ), ಅಥರ್ವ ಎಸ್. ಆರ್ (ರಾಮ ನಾಯ್ಕ್ ಎಂ ಹಾಗೂ ಸೌಮ್ಯ ದಂಪತಿಯ ಪುತ್ರ), ಧನ್ವಂತ್ ಕುಬಣೂರಾಯ ( ಸುಧಾಕರ ಕುಬಣೂರಾಯ ಹಾಗೂ ಸವಿತ ಸಾವಿತ್ರಿ ದಂಪತಿಯ ಪುತ್ರ), ಧನ್ವಿತ್ ಹೆಚ್. ಭಟ್ ( ಹರಿಹರ ಭಟ್ ಕೆಕ್ಕಾರ್ ಹಾಗೂ ಮಂಜುಳಾ ಹೆಚ್. ಭಟ್ ದಂಪತಿಯ ಪುತ್ರ), ಹವ್ಯಾಸ್ ಎಂ ಎಸ್ ( ಸುರೇಶ್ ಗೌಡ ಎಂ ಹಾಗೂ ವೀಣಾ ಕುಮಾರಿ ಟಿ ದಂಪತಿಯ ಪುತ್ರ), ಕೆ. ಮನ್ವಿತ್ ರೈ ( ಕೆ. ಮೋಹನ್ ರೈ ಹಾಗೂ ಮೈನಾ ದಂಪತಿಯ ಪುತ್ರ), ಕ್ಷಿತಿಜ್. ರೈ ( ಜಗದೀಶ್ ರೈ ಹಾಗೂ ಶೋಭಾ ಜೆ. ರೈ ದಂಪತಿಯ ಪುತ್ರ), ಪ್ರಜ್ವಲ ಕೃಷ್ಣ ಎಂ. ವಿ ( ವಿಜಯಕುಮಾರ್ ಎಂ ಹಾಗೂ ಪುಷ್ಪಾವತಿ ದಂಪತಿಯ ಪುತ್ರ), ರಿತ್ವಿಕ್. ಆರ್. ರೈ ( ರಘುರಾಮ ರೈ ಹಾಗೂ ವಿದ್ಯಾ ಕುಮಾರಿ ಕೆ ದಂಪತಿಯ ಪುತ್ರ), ಶಶಾಂಕ ಟಿ. ಆರ್ ( ರಘುರಾಮ ಟಿ. ಎಸ್ ಹಾಗೂ ದೀಪ್ತಿ ಆರ್. ಭಟ್ ದಂಪತಿಯ ಪುತ್ರ), ಯಶ್ವಿತ್ ಕುಮಾರ್ ಆರ್ ( ರಾಮ ಕೆ ಹಾಗೂ ಜಾನಕಿ ದಂಪತಿಯ ಪುತ್ರ) ಇವರಿಗೆ ಲೇಡಿ ಕಬ್ ಮಾಸ್ಟರ್ ಪುಷ್ಪಲತಾ ಕೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯಗುರುಗಳಾದ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.

























