ವಿಟ್ಲ : ಪುತ್ತಿಲ ಪರಿವಾರ ವಿಟ್ಲ ವಲಯ ಸಮಿತಿ ವತಿಯಿಂದ ಅಳಿಕೆ ಗ್ರಾಮ ನೆಕ್ಕಿದಪುಣಿಯ ಚಂದ್ರಹಾಸ ಇವರ ಮನೆ ನಿವೇಶನ ರಚನೆಗೆ ಸಹಾಯಧನ ನೀಡಲಾಯಿತು ಹಾಗೂ ಕಾರ್ತಿಮಾರು ಶ್ರೀ ನಾಗದೇವರು ಹಾಗೂ ಪರಿವಾರ ದೈವಗಳ ಕ್ಷೇತ್ರ ಆದಾಳ ಎರುಂಬು ಇಲ್ಲಿನ ಪ್ರತಿಷ್ಠೋತ್ಸವ ಕಾರ್ಯಕ್ರಮಕ್ಕೆ ಸಹಾಯಧನ ನೀಡಲಾಯಿತು.


ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ವಿಟ್ಲ ನಗರ ಅಧ್ಯಕ್ಷ ಮೋಹನ್ ಸೇರಾಜೆ, ಕ್ಷೇತ್ರ ಸಮಿತಿ ಉಪಾಧ್ಯಕ್ಷ ರಘುರಾಮ ರೈ, ವಕೀಲರಾದ ಶ್ರೀಕೃಷ್ಣ ಕೇಪು, ಸದಾಶಿವ ಅಳಿಕೆ, ಶರತ್ ಎನ್.ಎಸ್, ಲಕ್ಷ್ಮಣ ಗೌಡ, ತಿಲಕರಾಜ್ ಶೆಟ್ಟಿ, ರವಿಶಂಕರ್ ಬಲ್ಲಾಳ್, ವಿನೋದ್ ವಿಟ್ಲ ಉಪಸ್ಥಿತರಿದ್ದರು.



























