ಪುತ್ತೂರು : ಕರ್ನಾಟಕ ಅಂಚೆವೃತ್ತದ ಪ್ರಸ್ತುತಿ ಇದರ ಆಶಯದಲ್ಲಿ, ಬೆಂಗಳೂರಿನಲ್ಲಿ ನಡೆದ 13ನೇ ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನದ “ಕಾರ್ನಪೆಕ್ಸ್ – 2024” ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.


(3ರಿಂದ 5ನೇ ತರಗತಿ ವಿಭಾಗದಲ್ಲಿ ) ಪ್ರಜ್ವಲ್ ಕೃಷ್ಣ ಎಂ.ವಿ ( ವಿಜಯ ಕುಮಾರ್ ಎಂ.ವಿ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರ ) 4ನೇ ತರಗತಿ ಇವರು ಪ್ರಥಮ ಸ್ಥಾನ ಹಾಗೂ ( 6ರಿಂದ 8ನೇ ವಿಭಾಗದಲ್ಲಿ) ನಿಲಿಷ್ಕ ಕೆ ( ದಿನೇಶ್ ನಾಯ್ಕ್ ಕೆ.ಜಿ ಹಾಗೂ ಸ್ಮಿತಾಶ್ರೀ ಬಿ ದಂಪತಿಗಳ ಪುತ್ರ ) 8ನೇ ತರಗತಿ ಪ್ರಥಮ ಸ್ಥಾನಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳು ತಿಳಿಸಿದ್ದಾರೆ.

























