ದೋಸೆ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ದೋಸೆ ದಕ್ಷಿಣ ಭಾರತದ ಪ್ರಮುಖ ಆಹಾರ.., ಬೆಳಗಿನ ತಿಂಡಿಗೆ ದೋಸೆ ತಿನ್ನುವುದು ಏನೋ ಆನಂದ.. ದಿನವೂ ದೋಸೆ ತಿಂದರೂ ಬೇಸರವಾಗಲ್ಲ..
ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ದೋಸೆಗಳ ಮಹಾ ಉತ್ಸವ ನಡೆಯಲಿದೆ.
ಹೌದು.., ಫೆ.9,10,11 ರಂದು ರಿಫ್ರೆಶ್ ಕೆಫೆ ನೇತೃತ್ವದಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 10ರ ವರೆಗೆ ಬೊಳುವಾರಿನ ರಿಫ್ರೆಶ್ ಕೆಫೆಯಲ್ಲಿ ದೋಸೆ ಮೇಳ ನಡೆಯಲಿದೆ.
ಈ ದೋಸೆ ಮೇಳದಲ್ಲಿ 50ಕ್ಕೂ ಹೆಚ್ಚು ದೋಸಾ ವೆರೈಟಿಗಳು ದೊರೆಯಲಿದ್ದು, ದೋಸಾ ಪ್ರಿಯರು ಎಲ್ಲಾ ರೀತಿಯ ದೋಸೆಗಳ ರುಚಿಯನ್ನು ಸವಿಯಬಹುದಾಗಿದೆ…


























