ಬಂಟ್ವಾಳ : ಸುಮಾರು 8 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂದಾವರ ನಿವಾಸಿ ಇಲಿಯಾಸ್ ( ಆನೆ ಇಲ್ಯಾಸ್) ಬಂಧಿತ.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಆ.ಕ್ರ 60/2013 ಕಲಂ 341,504,324,506 ಜೊತೆಗೆ 34 ಐಪಿಸಿ ಪ್ರಕರಣದ ಆರೋಪಿ…, ಸುಮಾರು 8 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಲ್ಯಾಸ್ (50) ಎಂಬಾತನನ್ನು, ಫೆ.2 ರಂದು ಬಂಟ್ವಾಳ ನಗರ ಠಾಣಾ ಹೆಚ್.ಸಿ ಲತೀಫ್ ಹಾಗೂ ಪಿಸಿ ಮಲ್ಲಿಕ್ ಸಾಬ್ ರವರು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

























