ಬಂಟ್ವಾಳ : ಬಾಡಿಗೆ ಕೇಳಲು ಹೋದ ವೇಳೆ ಅವಾಚ್ಯ ಬೈದು ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಫರಂಗಿಪೇಟೆ ಪುದು ನಿವಾಸಿ, ಸಲೀಂ ಅಲ್ತಾಫ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕುಂಪನಮಜಲು ಎಂಬಲ್ಲಿರುವ ಸಲೀಂ ಅಲ್ತಾಫ್ ಅವರ ಒಡೆತನದ ಡೈಮಂಡ್ ಹೋಂ ಎಂಬ ಅಪಾರ್ಟ್ ಮೆಂಟ್ ನಲ್ಲಿ, ಬಾಡಿಗೆಗೆ ವಾಸವಾಗಿದ್ದ ಶಬೀರ್ ಎಂಬಾತನು ಕಳೆದ ಒಂದು ವರ್ಷದಿಂದ ಬಾಡಿಗೆ ಕೊಡಲು ಬಾಕಿ ಇದ್ದು ಹಾಗೂ ಆತನ ಬಾಡಿಗೆ ಕರಾರು ಮುಗಿದ ಕಾರಣ ಆತನಿಗೆ ವಿಚಾರ ತಿಳಿಸುವ ಸಲುವಾಗಿ ಫೆ.2 ರಂದು ಮಧ್ಯಾಹ್ನ ಸದ್ರಿ ಅಪಾರ್ಟ್ ಮೆಂಟ್ ಗೆ ತೆರಳಿರುತ್ತಾರೆ. ಆ ವೇಳೆ ಗೇಟಿನ ಬಳಿ ನಿಸಾರ್ ನ ಅಣ್ಣ ಶಬೀರ್ ಎಂಬಾತನು ತಡೆದು ನಿಲ್ಲಿಸಿ, ಹಲ್ಲೆ ನಡೆಸಿದ್ದು, ಬಳಿಕ ಅವ್ಯಾಚವಾಗಿ ಬೈದು ಮುಂದಕ್ಕೆ ಬಾಡಿಗೆ ಕೇಳಲು ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 14/2024 ಕಲಂ : 341, 323, 324, 504, 506 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























