ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳ ಘೋಷಣೆಯಾಗಿದ್ದು, ಪುತ್ತೂರು ಮಂಡಲದ ಅಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ ಒಂದು ಸ್ಥಾನಕ್ಕೆ ಇನ್ನೂ ಹೆಸರು ಘೋಷಣೆಯಾಗದಿರುವುದು ಕೂತೂಹಲ ಮೂಡಿಸಿದೆ.
ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ವಿಭಾಗಗಳಿಗೆ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳನ್ನು ನೇಮಕಗೊಳಿಸಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶಿಸಿದ್ದು, ಆದರೇ ಎರಡು ಸ್ಥಾನಗಳಿಗೆ ಇನ್ನೂ ಹೆಸರು ಘೋಷಣೆಯಾಗಿಲ್ಲ.., ಈ ವಿಚಾರವಾಗಿ ಸಾರ್ವಜನಿಕಗಳಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ನಡೆಯುತ್ತಿದೆ.
ಈ ಎರಡು ಸ್ಥಾನಗಳನ್ನು ಯಾರಿಗಾಗಿ ಕಾಯ್ದಿರಿಸಲಾಗಿದೆ ಅಥವಾ ಹೆಸರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಗೊಂದಲಗಳಿವೋ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರುವ ಬಗ್ಗೆ ಈಗಾಗಲೇ ವಿಚಾರಗಳು ಹರಿದಾಡುತ್ತಿದ್ದು, ಅವರಿಗಾಗಿ ಈ ಸ್ಥಾನಗಳನ್ನು ಮೀಸಲಿಡಲಾಗಿದೆಯೇ ಎಂಬ ಬಗ್ಗೆಯೂ ಕೂತುಹಲದ ವಿಚಾರಗಳು ಕೇಳಿಬರುತ್ತಿದ್ದು, ಸ್ಪಷ್ಟ ಮಾಹಿತಿಗಾಗಿ ಕಾದು ನೋಡಬೇಕಿದೆ..

























