ಪುತ್ತೂರು: ಬಲ್ನಾಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ನ ಮೂಲಭೂತ ವ್ಯವಸ್ಥೆಗಳಲ್ಲಿ ಕೊರತೆಯಿದೆ ಎಂದು ಅಲ್ಲಿ ಆಶ್ರಯ ಪಡೆದ ಸೋಂಕಿತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
15 ಜನರಿದ್ದರೂ ಕೇವಲ ಎರಡು ಸ್ನಾನಗೃಹಗಳಿದ್ದು ಅದರಲ್ಲೂ ಒಂದು ಬಾತ್ ರೂಮಿನ ಬಾಗಿಲು ಸರಿಯಾಗಿಲ್ಲ, ಶೌಚಾಲಯ ಕೂಡಾ ವ್ಯವಸ್ಥಿತವಾಗಿಲ್ಲ, ಈ ಕಾರಣದಿಂದಾಗಿ ನಮಗೆ ತೊಂದರೆಗಳಾಗುತ್ತಿದೆ, ಮೊದಲು ಎಲ್ಲರಿಗೂ ಬೇರೆ ಬೇರೆ ರೂಮ್ ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದರೂ, ಈಗ ಒಂದೇ ರೂಮ್ ನಲ್ಲಿ ಎರಡು, ಮೂರು ಜನರನ್ನೂ ಹಾಕಲಾಗಿದೆ. ಸರಿಯಾದ ರೀತಿಯಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆಗಳೂ ಇಲ್ಲ.
ಹಲವರಿಗೇ ನಾವು ದೂರು ನೀಡಿದ ಕಾರಣ ಒಂದು ಜಗ್ ನೀಡಲಾಗಿದೆ. ಎಲ್ಲರೂ ಒಂದೇ ಜಗ್ ನ್ನು ಬಳಸಿಕೊಳ್ಳಬೇಕಾಗಿದೆ. ಬಟ್ಟೆ ಒಗೆಯುವ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿಲ್ಲ, ಹಲವು ಜನರಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲ ಎಂದು ಹೇಳಿದರು ಇನ್ನೂ ವ್ಯವಸ್ಥೆಗಳನ್ನು ಸರಿ ಮಾಡಲಾಗಿಲ್ಲ, ಶಾಸಕರಿಗೂ ಈ ವಿಷಯದ ಬಗ್ಗೆ ದೂರು ನೀಡಲಾಗಿದ್ದು, ವ್ಯವಸ್ಥೆಗಳನ್ನು ಸರಿ ಪಡಿಸುವುದಾಗಿ ಶಾಸಕರು ಭರವಸೆಯನ್ನು ನೀಡಿ ಹೋಗಿದ್ದಾರೆ. ಆದಷ್ಟು ಬೇಗ ಇಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿದರೆ ನಮಗೆ ಉಪಕಾರವಾಗುತ್ತದೆ ಎಂದು ಸೋಂಕಿತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.