ಬಂಟ್ವಾಳ : ಯುವಕೇಸರಿ ಗೆಳೆಯರ ಬಳಗ ತಲೆಂಬಿಲ-ಅಮ್ಟಾಡಿ ಇದರ 10ನೇ ವಾರ್ಷಿಕೋತ್ಸವ ಫೆ.17 ರಂದು ಮನೆಜಾಲಿನಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ ವಹಿಸಲಿದ್ದಾರೆ.
ಹಿಂದೂ ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯರಾದ ರಾಧಾಕೃಷ್ಣ ಅಡ್ಯಂತಾಯ ಉಪನ್ಯಾಸ ನೀಡಲಿದ್ದಾರೆ.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಹಿಂದೂ ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯರಾದ ಜಗದೀಶ್ ನೆತ್ರಕೆರೆ, ಉದ್ಯಮಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ತುಂಬೆ ಸುರಭಿ ಸ್ಟೀಲ್ ಫ್ಯಾಬ್ರಿಕೇಶನ್ ನ ನವೀನ್ ಕುಮಾರ್ ಕೊಡ್ಮಾನ್, ಬಿ.ಸಿ. ರೋಡ್ ಅಮರ್ ಗ್ರೂಪ್ ನ ಉದ್ಯಮಿ ಕೆ. ಸತೀಶ್ ಕುಮಾರ್, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ದೇವಿನಗರ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಸಂಜೆ 5 ಗಂಟೆಯಿಂದ ಶನಿಪೂಜೆ ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ.
ನಾಗಶ್ರೀ ಮಿತ್ರವೃಂದ (ರಿ.) ಕಮ್ಮಾಜೆ, ತೆಂಕಬೆಳ್ಳೂರು, ಸ್ಟಾರ್ ವಾಯಿಸ್ ಮೆಲೋಡಿಸ್ ಮಂಗಳೂರು ಇದರ ಪ್ರಶಾಂತ್ ಕಂಕನಾಡಿ ಮತ್ತು ಬಳಗದವರಿಂದ ಗಾನ ಸಿಂಚನ, ಮಿಮಿಕ್ರಿ ಸ್ಟಾರ್ ಶರಣ್ ಕೈಕಂಬ ಇವರಿಂದ ಮಿಮಿಕ್ರಿ ಹಾಗೂ ಹಾಸ್ಯ ಕಾರ್ಯಕ್ರಮ ಮೂಡಿಬರಲಿದೆ.
ನಮ್ಮ ಕಲಾವಿದೆರ್ ಬೆದ್ರ ಅಭಿನಯದ ಬುದ್ಧಿ ಬುಡಯೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಅಯೋಧ್ಯೆಯಲ್ಲಿ ಕರಸೇವೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

