ಶಿಕ್ಷಕರು ಮಕ್ಕಳನ್ನ ತಿದ್ದಿ, ಅವರನ್ನ ಸರಿದಾರಿಯಲ್ಲಿ ಕರೆದುಕೊಂಡು ಹೋಗ್ಬೇಕು. ಆದ್ರೆ ಶಿಕ್ಷಕಿಯೇ ತಪ್ಪು ಮಾಡಿದ್ರೆ? ಅದು ಕೂಡ ಶ್ರೀರಾಮರ ಬಗ್ಗೆ ಶಾಲಾ ಶಿಕ್ಷಕಿ ಮಕ್ಕಳ ಮುಂದೆ ಅವಹೇಳನಕಾರಿ ಪಾಠ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಇದೀಗ ಆ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದೆ.
ಶ್ರೀರಾಮರ ಬಗ್ಗೆ ಶಾಲಾ ಶಿಕ್ಷಕಿ ಅವಹೇಳನ ಮಾತು
ಕಳೆದೆರಡು ದಿನದ ಹಿಂದೆ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಪ್ರಭಾ ಈಕೆಯ ವಿರುದ್ಧ ಶ್ರೀರಾಮನ ಕುರಿತು ಅವಹೇಳನಕಾರಿಯಾಗಿ ಪಾಠ ಮಾಡಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿತ್ತು. ಶ್ರೀರಾಮ ಕಲ್ಲು, ಕಲ್ಲಿಗೆ ಪೂಜೆ ಯಾಕೆ ಮಾಡುತ್ತೀರಾ.. ಹಿಂದೂ ಧರ್ಮಕ್ಕೆ ದಿಕ್ಕು ದೆಸೆಯಿಲ್ಲ ಎಂದು ನಾಲಿಗೆ ಹರಿಬಿಟ್ಟು ಮಾತನಾಡಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿತ್ತು.
ಶಿಕ್ಷಕಿಯ ಅವಹೇಳನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ, ಹಿಂದೂ ಕಾರ್ಯಕರ್ತರು ಹಾಗೂ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ರು.. ಅದಲ್ಲದೇ ಅವಹೇಳನ ಪಾಠ ಮಾಡಿದ ಶಿಕ್ಷಕಿಯನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ರು. ಇದೀಗ ಈ ಹೋರಾಟ ಮುಂದಿನ ಹಂತ ತಲುಪಿದೆ.
ಅವಹೇಳನ ಮಾಡಿದ ಶಿಕ್ಷಕಿ ವಿರುದ್ಧ ಪೋಷಕರಿಂದ ದೂರು!
ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ಪಾಂಡೇಶ್ವರ ಠಾಣೆಗೆ ಪೋಷಕ ಶರತ್ ಕುಮಾರ್ ದೂರು ಶಿಕ್ಷಕಿ Work is Worship ಪಾಠ ಮಾಡುವಾಗ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀರಾಮ ಸೇರಿದಂತೆ ಹಿಂದೂ ದೇವರ ಬಗ್ಗೆ ಅವಮಾನಕಾರಿ ಪಾಠ ಮಾಡಿದ್ದಾರೆ ಅಂತಾ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ವೇಳೆ ಹಿಂದೂ ಸಂಘಟನೆಯ ಮುಖಂಡರು ಕೂಡ ಸಾಥ್ ನೀಡಿದ್ದರು.
ಮಕ್ಕಳನ್ನ ತಿದ್ದಿ ತೀಡಿ, ಉತ್ತಮ ಆದರ್ಶಗಳನ್ನ ಹೇಳಿಕೊಡಬೇಕಾದ ಶಿಕ್ಷಕಿಯೇ ಈ ರೀತಿ ವಿವಾದ ಹುಟ್ಟುಹಾಕಿಕೊಂಡಿದ್ದು ಅನಾವಶ್ಯಕ. ಇದೀಗ ಇದೇ ಶಿಕ್ಷಕಿಯ ವಿರುದ್ಧ ದೂರು ಕೂಡ ದಾಖಲಾಗಿದೆ. ಹೀಗಾಗಿ ಈ ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಂತಾಗಿದೆ. ಇದೀಗ ಪೊಲೀಸರು ಯಾವ ಕ್ರಮ ಕೈಗೊಳ್ತಾರೆ ಕಾದು ನೋಡಬೇಕಿದೆ.