ಉಪ್ಪಿನಂಗಡಿ : ಕಾಮಗಾರಿಗಾಗಿ ತಂದಿರಿಸಲಾಗಿದ್ದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳವು ಮಾಡಿರುವ ಕುರಿತು ದೂರು ನೀಡಲಾಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಎನ್.ಆರ್. ಕನ್ಸ್ಟ್ರಕ್ಷನ್ ಲಿಮಿಟೆಡ್ ನ ಪಿ.ಆರ್.ಒ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕಂಪೆನಿಯ ಕಾಮಗಾರಿಗಾಗಿ ಕಬ್ಬಿಣದ 40 ಪ್ಲೇಟ್ ಗಳನ್ನು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕಾಂಚನ ಕ್ರಾಸನ ಹತ್ತಿರ ಇರಿಸಿದ್ದು, ಅಲ್ಲಿಂದ ಬೇರೆ-ಬೇರೆ ಸ್ಥಳಕ್ಕೆ ಕಾಮಗಾರಿಗೆ ಕೊಂಡು ಹೋಗುವುದಾಗಿರುತ್ತದೆ. 11-11-2023 ರಂದು ಬೆಳಿಗ್ಗೆ ಸದ್ರಿ ಪ್ಲೇಟ್ ಸದ್ರಿ ಸ್ಥಳದಲ್ಲಿ ಕಾಣದಿದ್ದು, ಈ ಬಗ್ಗೆ 14.11.2023 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿರುತ್ತದೆ.
ಪ್ರಕರಣ ಮುಂದುವರಿದಂತೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರೋ ಕಳ್ಳರು ಕಳವು ಮಾಡಿದ ಕಂಪನಿಯ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿರುವ ವಿಚಾರ ತಿಳಿದು ಫೆ.9 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ನೋಡಲಾಗಿ ಸ್ವಾಧೀನಪಡಿಸಿದ 40 ಕೆ ಎನ್ ಆರ್ ಕನಸ್ಟ್ರಕ್ಸನ್ ಪ್ಲೇಟ್ ಗಳನ್ನು ನೋಡಿ ಗುರುತಿಸಿದ್ದು, ಯಾರೋ ಕಳ್ಳರು ಅಂದಾಜು 100000 ರೂ. ಮೌಲ್ಯದ ಕಬ್ಬಿಣದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 21/2024 ಕಲಂ: 379 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























