ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆಯೊಂದು ದೃಶ್ಯ ಸಮೇತ ವೈರಲ್ ಆಗಿದೆ. ಇಂಡೋನೇಷ್ಯಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಸಿಡಿಲು ಬಡಿಯುವ ದೃಶ್ಯ ಹರಿದಾಡುತ್ತಿದೆ.
ಸಿಡಿಲು ಬಡಿದ ವೇಳೆ ಆಟಗಾರ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಕುಸಿತದ ಬಳಿಕ ಕೊಂಚ ಹೊತ್ತು ಉಸಿರಾಡಿದ್ದು, ಬಳಿಕ ಸಾವನ್ನಪ್ಪಿದ್ದಾನೆ. ಟ್ವಿಟ್ಟರ್ನಲ್ಲಿ ಸಿಡಿಲು ಬಡಿಯುವ ಭಯಾನಕ ದೃಶ್ಯ ಹರಿದಾಡುತ್ತಿದೆ.
ಮಾಹಿತಿಯಂತೆ, ಫೆಬ್ರವರಿ 10ರಂದು ನಡೆ ಘಟನೆ ಇದಾಗಿದೆ, ಪಶ್ಚಿಮ ಜಾವಾದ ಬಮಡಂಗ್ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯ ಏರ್ಪಡಿಸಲಾಗಿತ್ತು. ಈ ಸೌಹಾರ್ದದ ಪಂದ್ಯದ ವೇಳೆ ಏಕಾಏಕಿ ಮಳೆ ಪ್ರಾರಂಭವಾಯಿತು. ಮಳೆ ಪ್ರಾರಂಭವಾದಂತೆ ಆಟಗಾರನಿಗೆ ಸಿಡಿಲು ಬಡಿದಿದೆ.
ಸಿಡಿಲು ಬಡಿದ ರಭಸಕ್ಕೆ ಆಟಗಾರನ ಜೆರ್ಸಿಯು ಸುಟ್ಟು ಕರಕಲಾಗಿದೆ. ಆಟಗಾರನನ್ನು ಸರಿನಿಂಗ್ಸಿಹ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದಾನೆ.




























