ಬೆಂಗಳೂರು : ನಗರ ಪೊಲೀಸರು ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ನಗರದ ಚಾಮರಾಜಪೇಟೆ, ಮಹದೇವಪುರ, ರಾಮಮೂರ್ತಿನಗರದಲ್ಲಿ ಸಂಗ್ರಹಿಸಿದ್ದ 1.45 ಕೋಟಿ ರೂ. ಮೌಲ್ಯದ ನಿಷೇಧಿತ ಹುಕ್ಕಾ, ನಿಕೋಟಿನ್ ಉತ್ಪನ್ನವನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳ ವಶಪಡಿಸಿಕೊಂಡಿದೆ.
ಅಕ್ರಮವಾಗಿ ನಿಕೋಟಿನ್ ಉತ್ಪನ್ನ ಮಾರುತ್ತಿದ್ದ ಒಂಬತ್ತು ಜನರನ್ನು ಬಂಧಿಸಿದೆ.
ಬಂಧಿತರಿಂದ 1.10 ಲಕ್ಷ ನಗದು, ಟಾಟಾ ಏಸ್, 11 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.




























