ಅಬುಧಾಬಿಯಲ್ಲಿ 27 ಎಕರೆ ಜಾಗ, 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಹಿಂದೂ ದೇವಾಲಯ ಉದ್ಘಾಟನೆಗೆ ರೆಡಿಯಾಗಿದೆ. ಅಬುಧಾಬಿಯ ಅಬು ಮುರೇಖಾ ಪ್ರದೇಶದಲ್ಲಿ ನಿರ್ಮಾಣಗೊಂಡ ನಾರಾಯಣ ಮಂದಿರವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ.
ದೇವಾಲಯ ಉದ್ಘಾಟನೆಗೆ ಮೋದಿ ಯುಎಇ ತಲುಪಿದ್ದು, ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಬುಧಾಬಿಯಲ್ಲಿ ನಡೆದ ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಮೋದಿ 2015ರಲ್ಲಿ ದೇವಾಲಯ ನಿರ್ಮಾಣಕ್ಕೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ಗೆ ಮನವಿ ಮಾಡಿದ ಕ್ಷಣದಲ್ಲಿ ನಡೆದ ಮಾತುಕತೆಯನ್ನ ನೆನೆದಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ ನಾನು ಹೇಳಿದ ತಕ್ಷಣವೇ ಯುಎಇ ಅಧ್ಯಕ್ಷರು ನಾರಾಯಣ ಮಂದಿರಕ್ಕೆ ಒಪ್ಪಿಗೆ ನೀಡಿದ್ದರು. ದೇಗುಲ ನಿರ್ಮಾಣಕ್ಕೆ ಅವಕಾಶ ನೀಡಿದ ಯುಎಇ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದರು.
ಈ ನಾರಾಯಣ ಮಂದಿರದ ವಿಶೇಷತೆ ಏನು…!??
- ದುಬೈನ ಮೊದಲ ಹಿಂದೂ ದೇಗುಲ
- 2015ರಲ್ಲಿ ಮೋದಿ ಯುಎಇಗೆ ಹೋದಾಗ ಅಲ್ಲಿನ ರಾಜನ ಕೊಡುಗೆ
- ಯುಎಇಯಲ್ಲಿ ನಿರ್ಮಾಣವಾದ ಮೊದಲ ಕಲ್ಲಿನ ದೇವಸ್ಥಾನ
- 108 ಅಡಿ ಎತ್ತರದ ಸ್ವಾಮಿ ನಾರಾಯಣ ದೇವಾಲಯ
- ಸುಮಾರು 17 ಎಕರೆ ಜಾಗದಲ್ಲಿ 700 ಕೋಟಿ ರೂಪಾಯಿ ವೆಚ್ಚ
- 50,000 ಕಾರ್ಮಿಕರಿಂದ ಸ್ವಾಮಿ ನಾರಾಯಣ ಮಂದಿರ ನಿರ್ಮಾಣ
- ವಿನ್ಯಾಸದಲ್ಲಿ 7 ಗೋಪುರ, ಯುಎಇನ ಪ್ರತಿ ಎಮಿರೇಟ್ ಸಂಕೇತ
- ಧಾರ್ಮಿಕ ಪ್ರಕ್ರಿಯೆ ಜೊತೆಗೆ ಭೋಧನೆ ಶಾಲೆಗಳು, ಕ್ರೀಡಾಂಗಣ
- ಹೊರಗೆ ರಾಜಸ್ಥಾನದ ಮರಳುಗಲ್ಲು, ಒಳಗೆ ಬಿಳಿ ಅಮೃತಶಿಲೆ
- ಪ್ರಾಚೀನ ಹಿಂದೂ ಶಿಲ್ಪಶಾಸ್ತ್ರದ ಪ್ರಕಾರ ಕಟ್ಟಿರೋ ಮಂದಿರ
- 7 ಗೋಪುರಗಳಿದ್ದು, UAEನ 7 ದೇಶಗಳನ್ನು ಸೂಚಿಸುತ್ತದೆ
- 2017ರಲ್ಲಿ ಭೂಮಿ ಪೂಜೆ ಮಾಡಿದ್ದ ಪ್ರಧಾನಿ ಮೋದಿ
- ಕಳೆದ ಮೂರು ವರ್ಷಗಳಿಂದ ಕಂಬಗಳ ಕೆತ್ತನೆ ಕಾರ್ಯ
- ರಾಜಸ್ಥಾನ, ಗುಜರಾತ್ 2,000 ಕಾರ್ಮಿಕರಿಂದ ನಿರ್ಮಾಣ
- ಧಾರ್ಮಿಕ ಪ್ರಕ್ರಿಯೆ ಜೊತೆಗೆ ಭೋಧನಾ ಶಾಲೆ, ಕ್ರೀಡಾಂಗಣ
- ಸುಂದರ ಉದ್ಯಾನಗಳು, ಸಭಾಂಗಣ, ಮಳಿಗೆಯ ಸೌಲಭ್ಯ
- ಹಿಂದೂ ಸಂಸ್ಕೃತಿ ಬಗ್ಗೆ ಅನ್ವೇಷಿಸಲು ಮುಕ್ತವಾದ ಅವಕಾಶ
- ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ




























