ಬಾಂಬೆ ಮಿಠಾಯಿ (ಕಾಟನ್ ಕ್ಯಾಂಡಿ) ಅಂದ್ರೆ ಬಾಯಲ್ಲಿ ನೀರೂರಿಸದವರು ಯಾರಿಲ್ಲ. ಬಹುತೇಕರು ಈ ಮಿಠಾಯಿಯನ್ನು ಸವಿದೇ ಸವಿದಿರುತ್ತಾರೆ. ಆದರೀಗ ಬಾಂಬೆ ಮಿಠಾಯಿಯಲ್ಲಿ ಕ್ಯಾನ್ಸರ್ ಕಾರಕ ಪತ್ತೆಯಾಗಿದೆ. ಇದೇ ಕಾರಣಕ್ಕೆ ತಮಿಳುನಾಡಿನಲ್ಲಿ ಈ ಮಿಠಾಯಿಯನ್ನು ಬ್ಯಾನ್ ಮಾಡಿದೆ.
ಗಿಂಡಿಯ ಸರ್ಕಾರಿ ಆಹಾರ ವಿಶ್ಲೇಷನಾ ಪ್ರಯೋಗಾಲಯ ಈ ಬಗ್ಗೆ ಅಧ್ಯಯನ ನಡೆಸಿದ್ದು, ಕಾಟನ್ ಕ್ಯಾಂಡಿಯಲ್ಲಿ ಜವಳಿ ಬಣ್ಣ ಮತ್ತು ರಾಸಾಯನಿಕ ರೋಡೋಮಿನ್-ಬಿ ಪತ್ತೆಯಾಗಿದೆ. ಹೀಗಾಗಿ ಇದರಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕಾಟನ್ ಕ್ಯಾಂಡಿಯನ್ನ ಇದೀಗ ತಮಿಳುನಾಡು ಬ್ಯಾನ್ ಮಾಡಿದೆ.
ಪುದುಚೇರಿಯಲ್ಲೂ ಇತ್ತೀಚೆಗೆ ಬಾಂಬೆ ಮಿಠಾಯಿಯನ್ನು ಬ್ಯಾನ್ ಮಾಡಲಾಗಿದೆ. ಇದೀಗ ಆರೋಗ್ಯ ದೃಷ್ಟಿಯಿಂದ ತಮಿಳುನಾಡಿನಲ್ಲಿ ಕಾಟನ್ ಕ್ಯಾಂಡಿ ಮಾರಾಟ ಮಾಡದಂತೆ ಕ್ರಮ ವಹಿಸಿದೆ.




























