ಮಂಗಳೂರು : ಕರ್ನಾಟಕ ಕರಾವಳಿ ಗಡಿಯಲ್ಲಿ ಚೀನಾಗೆ ಸೇರಿದೆ ಎಂದು ಹೇಳಲಾದ ಬೋಟ್ವೊಂದು ಪತ್ತೆಯಾಗಿದೆ.
ಚೀನಾ ಬೋಟ್ ಲೈಟ್ ಮೀನುಗಾರಿಕೆ ನಡೆಸುತ್ತಿದ್ದ ವೀಡಿಯೋವನ್ನು ರಾಜ್ಯದ ಕರಾವಳಿಯ ಮೀನುಗಾರರು ಸೆರೆ ಹಿಡಿದಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದೆ.
ಮೂರು ದಿನಗಳ ಹಿಂದೆ ಚೀನಾ ದೇಶದ್ದು ಎಂದು ಹೇಳಲಾದ ಬೋಟ್ ಪತ್ತೆಯಾಗಿದೆ. ಬೋಟ್ನಲ್ಲಿ ಚೀನಾ ಬಾವುಟವನ್ನು ಕಂಡಿದೆ. ರಾಜ್ಯದ ಪರ್ಸಿನ್ ಬೋಟ್ ಮೀನುಗಾರರು ಚೀನಾ ಬೋಟ್ ಮೀನುಗಾರಿಕೆ ಮಾಡುವ ವಿಡಿಯೋವನ್ನು ಮಾಡಿದ್ದಾರೆ. ಕರಾವಳಿ ಕಾವಲು ಪಡೆ ಪೊಲೀಸರು ಇದರಿಂದ ಅಲರ್ಟ್ ಆಗಿದ್ದಾರೆ.




























