ಪುತ್ತೂರು : ಸದನದಲ್ಲಿ ಆರ್. ಅಶೋಕ್ ರವರ ಹೇಳಿಕೆ ಹಾಗೂ ಹಿಂದೂ ದೇವಾಲಯಗಳ ಧಾರ್ಮಿಕ ನಿಧಿ ವಿಚಾರ ಮತ್ತು ಜೆರೋಸಾ ಶಾಲೆಯ ಪ್ರಕರಣದಲ್ಲಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸದೆ ಇರುವ ವಿಚಾರವನ್ನು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಖಂಡಿಸಿದ್ದಾರೆ.
ರಾಷ್ಟ್ರದ ಕಾರ್ಯ, ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿರುವ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿಸಿದ್ದೇನೆ ಎನ್ನುವ ಆರ್. ಅಶೋಕ್ ಅವರೆ ನಿಮಗೆ ನಾಚಿಕೆ ಆಗುದಿಲ್ಲವೇ..!?
ಕೋವಿಡ್ ಸಂದರ್ಭದಲ್ಲಿ ನೀವು ಆರಾಮದಿಂದ ಮಲಗಿದ್ದಾಗ ಸಮಾಜದ ಪ್ರತಿಯೊಂದು ಕಾರ್ಯ ಮಾಡಿದ ಬಜರಂಗದಳದ ಕಾರ್ಯಕರ್ತರನ್ನು ಹೇಗೆ ಮರೆತಿದ್ದೀರಿ. ನೀವು ಅಧಿಕಾರಿಕ್ಕೇರಕ್ಕೇರಿದ್ದು, ಕಾರ್ಯಕರ್ತರ ಸಂಘಟನೆ ಹಾಗೂ ಶ್ರಮದಿಂದಲೇ ಹೊರತು, ನಿಮ್ಮ ಹಣದಿಂದ ಅಲ್ಲ.ಆರ್ ಅಶೋಕ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕೆಂದು ಭಾಜಪ ರಾಜ್ಯ ನಾಯಕರಲ್ಲಿ ಆಗ್ರಹಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿನಿಯಮದಡಿಯಲ್ಲಿ ಹಿಂದೂ ದೇವಾಲಯಗಳ ಸಾಮಾನ್ಯ ನಿಧಿಯನ್ನು ಪರ್ಸಂಟೇಜ್ ಆಧಾರದಲ್ಲಿ ದೋಚುವ ಕೆಲಸವನ್ನು ರಾಜ್ಯ ಸರಕಾರ ಮಾಡಲು ಹೊರಟಿದ್ದು, ಇತರ ಮತಗಳ ಧಾರ್ಮಿಕ ಕೇಂದ್ರಗಳ ಹಣವನ್ನು ಇತರೆ ಯೋಜನೆಗಳಿಗೆ ವಿನಿಯೋಗಿಸಿ, ಆಗ ಒಪ್ಪಿಕೊಳ್ತೇವೆ.
ಇಲ್ಲವಾದಲ್ಲಿ ರಾಜ್ಯಾದ್ಯಂತ ಚಳುವಳಿಗಳನ್ನು ನಡೆಸಿ ನಮ್ಮ ಧಾರ್ಮಿಕ ಸಂಸ್ಥೆಗಳ ಹಣವನ್ನು ದುರುಪಯೋಗ ಮಾಡದಂತೆ ತಡೆದು ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಜೆರೋಸಾ ಶಾಲೆಯ ಘಟನೆಯಲ್ಲಿ ಶಾಸಕರು ಹಾಗೂ ಸಂಘಟನೆಯ ಪ್ರಮುಖರ ವಿರುದ್ಧ ಕೇಸು ದಾಖಲಿಸಿದ್ದೀರಿ ಮತ್ತು ಅದನ್ನು ಸ್ವೀಕಾರ ಮಾಡುತ್ತೇವೆ. ಆದರೆ ಸರಕಾರ, ಆಡಳಿತ ಧರ್ಮದ ಅನುಸಾರವಾಗಿ, ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟ ಶಿಕ್ಷಕಿ ಪ್ರಭಾ ಅವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ನಡೆಸುತ್ತೇವೆ.
ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು, ಪ್ರತಿಭಟನೆಯಲ್ಲಿ ಭಾಗವಹಿಸಿದ ಉಳ್ಳಾಲದ ಶಿಕ್ಷಕಿಯನ್ನು ವಜಾಗೊಳಿಸಿದ ಸಂಸ್ಥೆಗಳಿಗೆ ನೇರ ಎಚ್ಚರಿಕೆಯನ್ನು ನೀಡುತ್ತಿದ್ದೇವೆ., ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸಿದರೆ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಹೇಳಿದ್ದಾರೆ.



























