ಪುತ್ತೂರು : ಮುರದಲ್ಲಿ ಸಂಭವಿಸಿದ ಟಿಪ್ಪರ್ ಹಾಗೂ ಸ್ಕೂಟರ್ ನಡುವಿನ ಅಪಘಾತದಲ್ಲಿ, ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದು, ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೇಜಸ್ ಪಿ (24) ಮೃತ ಸ್ಕೂಟರ್ ಸವಾರ.
ಸಂದೀಪ್ ಎಂಬವರು ನೀಡಿದ ದೂರಿನ ಮೇರೆಗೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಫೆ.22 ರಂದು ಸಂಜೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರು ಟಿಪ್ಪರ್ ಲಾರಿಯನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ, ಸದ್ರಿ ಲಾರಿಯ ಮುಂದೆ ಹೋಗುತ್ತಿದ್ದ ಸ್ಕೂಟರಿಗೆ ಅಪಘಾತಪಡಿಸಿದ ಪರಿಣಾಮ, ಸ್ಕೂಟರ್ ಸವಾರ ತೇಜಸ್ ಪಿ (24) ಹಾಗೂ ಸಹಸವಾರ ಪವನ್ ಕುಮಾರ್ (26) ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ, ವೈದ್ಯರು ಸವಾರ ತೇಜಸ್ ಪಿ ರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಸಹಸವಾರನಾಗಿದ್ದ ಪವನ್ ಕುಮಾರ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 24/2024 ಕಲಂ: 279, 338, 304(A) ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.