ಪುತ್ತೂರು : ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು 8ನೇ ಮತ್ತು 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನಾಧರಿಸಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಶೈಕ್ಷಣಿಕ 2023 -24 ರಲ್ಲಿ ಸಂಘಟಿಸಲಾದ ಪರೀಕ್ಷೆಗಳಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 450 ವಿದ್ಯಾರ್ಥಿಗಳು ಭಾಗವಹಿಸಿದ್ದು, ತೇರ್ಗಡೆ ಹೊಂದಿರುತ್ತಾರೆ. 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ಬಂಗಾರದ ಪದಕಗಳಿಗೆ ಭಾಜನರಾಗಿರುತ್ತಾರೆ.
ರಾಮಾಯಣ ವಿಭಾಗದಲ್ಲಿ ಎಂಟನೆಯ ತರಗತಿಯ ಅಪೇಕ್ಷಾ ಎನ್ (ವೆಂಕಟರಮಣ ಕಾರಂತ್ ಮತ್ತು ಸಂಧ್ಯಾ.ಎನ್ ದಂಪತಿ ಪುತ್ರಿ) , ಸಾನ್ವಿ ಎಸ್ ಪ್ರಭು (ಸಂತೋಷ್ ಕುಮರ್.ಎ ಮತ್ತು ಸವಿತಾ.ಕೆ ದಂಪತಿ ಪುತ್ರಿ) , ಅವನಿ ಘಾಟೆ ( ರಘುನಂದ ಘಾಟೆ.ಡಿ ಮತ್ತು ಮಮತಾ.ಆರ್.ಘಾಟೆ ದಂಪತಿ ಪುತ್ರಿ) ಮತ್ತು ಸಾನ್ವಿಕಾ ಎಸ್ ( ವಸಂತ ಗೌಡ ಮತ್ತು ಶೋಭ ದಂಪತಿ ಪುತ್ರಿ) ಹಾಗೂ ಮಹಾಭಾರತ ವಿಭಾಗದಲ್ಲಿ ಒಂಭತ್ತನೆಯ ತರಗತಿಯ ಸಾನ್ವಿಕಾ ಎಸ್ ರೈ ( ಜಗನ್ನಾಥ ರೈ ಎಸ್ ಮತ್ತು ಸುರೇಖಾ.ಜೆ.ರೈ ದಂಪತಿ ಪುತ್ರಿ), ಪ್ರಣವ ಕೃಷ್ಣ ( ಕೃಷ್ಣ ಪ್ರಸನ್ನ ಮತ್ತು ಪ್ರತಿಭಾ ಪ್ರಸನ್ನ ದಂಪತಿ ಪುತ್ರ) , ಆದೀಶ್ ಜೈನ್ ( ಯಶೋಧರ ಜೈನ್ ಮತ್ತು ಮಮತಾ ದಂಪತಿ ಪುತ್ರ), ಮತ್ತು ತೇಜಸ್ ಕೆ ಆರ್ ( ರಾಮಕೃಷ್ಣ ಗೌಡ ಮತ್ತು ಸುಜಾತ ದಂಪತಿ ಪುತ್ರ). ಇವರು ಚಿನ್ನದ ಪದಕಕ್ಕೆ ಭಾಜನರಾದ ವಿದ್ಯಾರ್ಥಿಗಳು ಎಂಬುದಾಗಿ ಶಾಲಾ ಮುಖ್ಯ ಗುರುಗಳು ತಿಳಿಸಿರುತ್ತಾರೆ.