ಪುತ್ತೂರು: ಕಬಕ ಮಹಾದೇವೀ ವಿಶ್ವಸ್ತ ಮಂಡಳಿ ಕಾರ್ಯದರ್ಶಿ ಪೂವಪ್ಪ ನಾಯ್ಕ್ (65 ವ)ರವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇವರು ಕಬಕ ಮಹಾದೇವೀ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಮಿತ್ತೂರು ಸರಕಾರಿ ಶಾಲೆಯ ಅಧ್ಯಾಪಕರಾಗಿ ಹಾಗೂ ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ರಾಗಿದಕುಮೇರು ಪ್ರಾಥಮಿಕ ಶಾಲೆಯ ಶಿಕ್ಷಕಿ ರಂಜಿನಿ, ಹಾಗೂ ಪುತ್ರಿ ಯರಾದ ಹೇಮಾ, ತೇಜಸ್ವಿನಿ ಯವರನ್ನು ಅಗಲಿದ್ದಾರೆ.