ಪುತ್ತೂರು : ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ 5 ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒತ್ತಡದ ಹಾಕಿ ಬಳಸಿಕೊಳ್ಳುತ್ತಿರುವ ವಿಚಾರಕ್ಕೆ ಪುತ್ತಿಲ ಪರಿವಾರ ಖಂಡನೆ ವ್ಯಕ್ತಪಡಿಸಿದೆ.
ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆಯ ಕೆಲಸ , ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ಮನೆಗೆ ಆಹಾರ ಸಾಗಾಟ, ಪಲ್ಸ್ ಪೊಲೀಯೋ, ಪೋಷಣ್ ಟ್ರ್ಯಾಕರ್, ಮತದಾನ ಸೇರ್ಪಡೆ-ರದ್ದು ತಿದ್ದುಪಡಿ ಮೊದಲಾದ ಕೆಲಸಗಳಿದ್ದು, ಅದರ ತೀವ್ರ ಒತ್ತಡದ ನಡುವೆ ಪುಟಾಣಿ ಮಕ್ಕಳಿಗೆ ಪಾಠದ ಸಮಯವೇ ಇಲ್ಲದಂತಾಗಿದೆ. ಇದರ ನಡುವೆ ಕಳೆದ ಎರಡು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳವನ್ನು ನೀಡಿಲ್ಲ ಎನ್ನುವುದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಕಾಂಗ್ರೆಸ್ ಪಕ್ಷ ತನ್ನ ಯೋಜನೆಯ ಸಮೀಕ್ಷೆಗೆ ಉಪಯೋಗಿಸುವುದನ್ನು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ಸಂಘ ತೀವ್ರ ವಿರೋಧಿಸಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಪಕ್ಷದ ಕೆಲಸಕ್ಕೆ ಉಪಯೋಗಿಸುವುದನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಕೈಬಿಡದಿದ್ದರೆ ಮುಂದೆ ಜರಗುವ ಹೋರಾಟವನ್ನು ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದೆ. ಕಾರ್ಯಕರ್ತೆಯರ ಹೋರಾಟಕ್ಕೆ ಪುತ್ತಿಲ ಪರಿವಾರ ಸಂಪೂರ್ಣ ಬೆಂಬಲ ಘೋಷಿಸಿದೆ.



























