ವಿಟ್ಲ : ಮನೆಲ ಚರ್ಚ್ ಪ್ರಧಾನ ಧರ್ಮಗುರುವೊರ್ವರು ತಮ್ಮದೇ ಚರ್ಚ್ ವ್ಯಾಪ್ತಿಯ ಹಿರಿಯ ಪ್ರಾಯಸ್ಥ ದಂಪತಿ ಜೊತೆ ಅನುಚಿತವಾಗಿ ವರ್ತಿಸಿ..,ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ (79) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ರವರು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರೆನ್ನಲಾಗಿದೆ. ಈ ವೇಳೆ ಧರ್ಮಗುರು ಫಾ. ನೆಲ್ಸನ್ ರವರು ಪ್ರಾಯಸ್ಥ ದಂಪತಿ ಜೊತೆ ಅನುಚಿತವಾಗಿ ವರ್ತಿಸಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಪಾದ್ರಿ ನೆಲ್ಸನ್ ರವರು ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಈ ಬಗ್ಗೆ ಎಫ್.ಐ.ಆರ್ ದಾಖಲು ಮಾಡಬೇಕು ಎಂದು ವೃದ್ಧ ದಂಪತಿಯ ಕುಟುಂಬದವರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.


























