ಬೆಳ್ಳಾರೆ : ವಂತಿಗೆ ವಿಚಾರವಾಗಿ ತಕರಾರು ತೆಗೆದು ಹಲ್ಲೆ ನಡೆಸಿರುವುದಾಗಿ ಆರೋಪಿ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಪುಣ್ಚಪ್ಪಾಡಿ ನಿವಾಸಿ ಅಬ್ದುಲ್ ಗಫೂರ್ ನೀಡಿರುವ ದೂರಿನ ಮೇರೆಗೆ ಹಸೈನಾರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಬ್ದುಲ್ ಗಫೂರ್ ಮಾ.1 ರಂದು ಮಧ್ಯಾಹ್ನ ಸವಣೂರು ಮಸೀದಿಯ ಬಳಿ ತನ್ನ ಪರಿಚಯದರೊಂದಿಗೆ ಮಾತನಾಡುತ್ತಿದ್ದಾಗ ಹಸೈನಾರ್ ಬಂದು ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು ಬೈದಿದ್ದು, ಬಳಿಕ ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ.
ಸದ್ರಿ ಘಟನಾ ಸ್ಥಳಕ್ಕೆ ಹಸೈನಾರ್ ಅಣ್ಣ ಅಬ್ದುಲ್ ರಜಾಕ್ ಮತ್ತು ಇತರರು ಬಂದಿದ್ದು, ಈ ವೇಳೆ ಅಬ್ದುಲ್ ಗಫೂರ್ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:25/2024 ಕಲಂ: 324, 307, 504, 506 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























