ಕಡಬ : ಪದವಿಪೂರ್ವ ಕಾಲೇಜಿನ ಆವರಣದೊಳಗೆ ಮುಸುಕುಧಾರಿ ಯುವಕನೊಬ್ಬ ಬಂದು ಆ್ಯಸಿಡ್ ದಾಳಿ ನಡೆಸಿದ ಘಟನೆ ಕಡಬದಲ್ಲಿ ನಡೆದಿದೆ.

ಘಟನೆಯಿಂದಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಲಿನ ಸಿಬಿ ಹಾಗೂ ಇನ್ನಿಬ್ಬರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ್ಯಸಿಡ್ ದಾಳಿ ನಡೆಸಿದ ಯುವಕನನ್ನು ವಶಕ್ಕೆ ಪಡೆಯಲಾಗಿದ್ದು, ವಿದ್ಯಾರ್ಥಿನಿ ಮತ್ತು ಯುವಕ ಒಂದೇ ಮತಕ್ಕೆ ಸೇರಿದ್ದವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿ ನಡೆಸಿದ ಯುವಕ ಕೇರಳ ಮೂಲದವನಾಗಿದ್ದು, ಎಂಬಿಎ ವಿದ್ಯಾರ್ಥಿ ಎನ್ನಲಾಗಿದೆ.
ಗಾಯಗೊಂಡ ವಿದ್ಯಾರ್ಥಿನಿಯರಲ್ಲಿ ಓರ್ವ ಯುವತಿಯ ತಾಯಿಯ ಊರು ಕೇರಳವಾಗಿದೆ.

























