ಪ್ರೀತಿ ಪಾತ್ರರನ್ನ ಡಾರ್ಲಿಂಗ್ ಎಂದು ಕರೆಯೋದು ಸಾಮಾನ್ಯ. ಆದರೆ ಅಪರಿಚಿತರನ್ನ ಡಾರ್ಲಿಂಗ್ ಎಂದು ಕರೆದರೆ ಕ್ರಿಮಿನಲ್ ಅಪರಾಧವಾಗುತ್ತೆ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ.
ಅಪರಿಚಿತ ಮಹಿಳೆಯರನ್ನ ಡಾರ್ಲಿಂಗ್ ಎಂದು ಕರೆದರೆ ಅದು ಲೈಂಗಿಕ ಕಿರುಕುಳ ಪ್ರಕರಣಕ್ಕೆ ದಾಖಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಐಪಿಸಿ ಸೆಕ್ಷನ್ 354A ಮತ್ತು 509ರ ಅಡಿಯಲ್ಲಿ ಇದು ಕ್ರಿಮಿನಲ್ ಅಪರಾಧವಾಗುತ್ತೆ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ.
ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಮಹಿಳಾ ಪೇದೆಗೆ ಡಾರ್ಲಿಂಗ್ ಎಂಬ ಕರೆದಿದ್ದಾನೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಜೆ ಸೇನ್ಗುಪ್ತಾ ಅವರು ವ್ಯಕ್ತಿಗೆ ಶಿಕ್ಷೆ ವಿಧಿಸಿದ್ದಾರೆ.
ಸೆಕ್ಷನ್ 354A ಅಡಿಯಲ್ಲಿ ಲೈಂಗಿಕ ಕಿರುಕುಳ ಅಪರಾಧಕ್ಕೆ ಇದು ಸೇರುತ್ತದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅಪರಿಚಿತ ಮಹಿಳೆ, ಪೊಲೀಸ್ ಪೇದೆ ಅಥವಾ ಯಾರೇ ಆಗಲಿ. ಒಬ್ಬ ವ್ಯಕ್ತಿ ಕುಡಿದಿರಲಿ ಅಥವಾ ಇಲ್ಲದಿರಲಿ. ಬೀದಿಯಲ್ಲಿ ಸಿಕ್ಕ ಸಿಕ್ಕವರಿಗೆ ಡಾರ್ಲಿಂಗ್ ಎಂದು ಹೇಳುವುದು ಆಕ್ಷೇಪಾರ್ಹ ಎಂದ ಪೀಠವು ಗಮನಿಸಿದೆ.


























