ಪುತ್ತೂರು : ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಕಡಬದ ವಿದ್ಯಾರ್ಥಿನಿಯರ ಮೇಲೆ ಅಬೀನ್ ಎಂಬಾತ ಆ್ಯಸಿಡ್ ದಾಳಿ ನಡೆಸಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ವಿಷಯಾಗಿದ್ದು, ಪುತ್ತಿಲ ಪರಿವಾರ ಈ ಘಟನೆಯನ್ನು ಖಂಡಿಸಿದೆ.
ಇಂದು ಬೆಳಗ್ಗೆ ವಿದ್ಯಾರ್ಥಿನಿಯರ ಮೇಲೆ ಅಬೀನ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದಾನೆ. ಒಬ್ಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜ್ಯ ಸರ್ಕಾರದ ಅತಿಯಾದ ಅಲ್ಪಸಂಖ್ಯಾತ ಓಲೈಕೆಯಿಂದ ಭಯವೇ ಇಲ್ಲದಂತಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಂತೂ ಗಾಂಜಾ, ಕಳ್ಳತನ, ಕೊಲೆ ಪ್ರಕರಣಗಳು, ತಲವಾರು ದಾಳಿಗಳು, ಲವ್ ಜಿಹಾದ್, ಗೋವು ಕಳ್ಳತನ, ಹಲ್ಲೆ ಅತಿಯಾಗಿದ್ದು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಇವೆಲ್ಲಾ ನಡೆಯುತ್ತಿದೆ. ಇದೀಗ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣವಂತು ಆಡಳಿತ ವೈಫಲ್ಯಕ್ಕೆ ಸಾಕ್ಷಿಕರಿಸಿದೆ. ಜಿಲ್ಲೆಯಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಸರ್ಕಾರ ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚರವಾಗದಿದ್ದರೆ ಜನತೆಯೇ ಬೀದಿಗಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಬೇಕಾದಿತು.
ಕಡಬ ಆ್ಯಸಿಡ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪುತ್ತಿಲ ಪರಿವಾರ ಆಗ್ರಹಿಸಿದೆ.


























