ವಿಶಾಖಪಟ್ಟಣ : ಮದುವೆ ಸಮಾರಂಭಗಳ ಫೋಟೋಗ್ರಾಫರ್ನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಪಿ ಸಾಯಿ ವಿಜಯ್ ಪವನ್ ಕಲ್ಯಾಣ್ ಕೊಲೆಯಾದ ವೃತ್ತಿಪರ ಫೋಟೋಗ್ರಾಫರ್.
ವಿಜಯ್ ಪವನ್ ಕಲ್ಯಾಣ್ ಬಳಿಯಿದ್ದ 15 ಲಕ್ಷ ಮೌಲ್ಯದ ಕ್ಯಾಮರಾಗಾಗಿ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಲೆದರ್ ಬೆಲ್ಟ್ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಮುಲಸ್ಥನಮ್ ಬಳಿಯ ಗೋಧಾವರಿ ದಡದಲ್ಲಿ ಶವವನ್ನು ಹೂಳಿದ್ದರು.
ಸಾಯಿ ವಿಜಯ್ಗೆ ರವುಲಪಲೆಮ್ನ 19 ವರ್ಷದ ಶಣ್ಮುಖ ತೇಜ ಎಂಬುವವರಿಂದ ಆನ್ಲೈನ್ ಮೂಲಕ ಫೋಟೋಗ್ರಫಿಗೆ ಆಹ್ವಾನ ಬಂದಿತ್ತು. ಅಂತೆಯೇ ಶಣ್ಮುಖ ರಾಜಮಹೇಂದ್ರವರಂ ರೈಲ್ವೇ ನಿಲ್ದಾಣದಲ್ಲಿ ಸಾಯಿ ವಿಜಯ್ನನ್ನು ಪಿಕ್ ಮಾಡಿದ್ದರು. ನಂತರ ತೇಜ್ ಅಂಡ್ ಗ್ಯಾಂಗ್ ಆತನ ಬಳಿಯಿದ್ದ ಕ್ಯಾಮರಾಗಾಗಿ ಕೊಲೆ ಮಾಡಿದ್ದರು. ಫೆಬ್ರವರಿ 26 ರಂದು ಕೊಲೆ ಮಾಡಿ ಶವವನ್ನು ಹೂಳಿ ಬಂದಿದ್ದರು.
ನಂತರ ಸಾಯಿ ವಿಜಯ್ ಪವನ್ ಕಲ್ಯಾಣ್ ಪೋಷಕರು, ಮಗ ನಾಪತ್ತೆ ಆಗಿರುವ ಬಗ್ಗೆ ಫೆಬ್ರವರಿ 29 ರಂದು ದೂರು ದಾಖಲಿಸುತ್ತಾರೆ. ಪೊಲೀಸರು ಇದೀಗ ಕೊಲೆಯ ರಹಸ್ಯವನ್ನು ಬೇಧಿಸಿದ್ದಾರೆ. ತೇಜ ಅಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಯಿ ವಿಜಯ್ ಪವನ್ ಕಲ್ಯಾಣ್ ಅವರನ್ನು ಆನ್ಲೈನ್ ಮೂಲಕ ಸಂಪರ್ಕಿಸಿ ಈ ಪ್ಲಾನ್ ಮಾಡಿದ್ದರು ಎಂದು ತಿಳಿದುಬಂದಿದೆ. ಸುಮುಖ್ ತೇಜ್, ತಾನು ಮಾಡಿರುವ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

























