ಬೆಂಗಳೂರು : 2.5 ಮಿಲಿಯನ್ ಡಾಲರ್ ಕೊಟ್ಟಿಲ್ಲ ಅಂದರೆ ಬಸ್, ರೈಲು, ಬಸ್ ನಿಲ್ದಾಣ ಸೇರಿ ಹಲವು ಕಡೆ ಸ್ಫೋಟಿಸೋದಾಗಿ ಬೆದರಿಕೆ ಕರೆ ಬಂದಿದೆ.
ಮುಖ್ಯಮಂತ್ರಿ, ಗೃಹ ಸಚಿವ, ಉಪಮುಖ್ಯಮಂತ್ರಿ ಹಾಗೂ ನಗರ ಪೊಲೀಸ್ ಕಮಿಷನರ್ಗೆ ಬೆದರಿಕೆಯ ಮೇಲ್ ಬಂದಿದೆ.
ಇ-ಮೇಲ್ ಸಂಬಂಧ ಸಿಸಿಪಿಎಸ್ (ಸಿಸಿಬಿ ಸೈಬರ್ ಕ್ರೈಮ್) ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 10786progongmail.com. ಅಕೌಂಟ್ನಿಂದ ಮೇಲ್ ಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.


























