ವಿಟ್ಲ : ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ದಕ ಜಿಲ್ಲೆ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಹಾಗೂ ಅಶಕ್ತರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಬೊಬ್ಬೆಕ್ಕೇರಿ ಗಜಾನನ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ರಮೇಶ್ ವರಪ್ಪಾದೆ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಸಂಘದ ಜಿಲ್ಲಾ ಕಾರ್ಯದರ್ಶಿ ರವಿ ರೈ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ, ಬಂಟ್ವಾಳ ವಲಯದ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ, ಮುಡಿಪು ವಲಯದ ಅಧ್ಯಕ್ಷ ವಿಶ್ವನಾಥ ರೈ ಅಡ್ಕ ಕುಂಜತ್ತೂರು, ಕೈಕಂಬ ವಲಯದ ಅಧ್ಯಕ್ಷ ಧೀರಜ್ ಅಮೀನ್, ಎಕ್ಕೂರು ವಲಯದ ಅಧ್ಯಕ್ಷ ಗಣೇಶ್ ಶೆಟ್ಟಿ ಮತ್ತು ಮುಡಿಪು ವಲಯದ ಕಾರ್ಯದರ್ಶಿ ಕಮರುದ್ದೀನ್ ಮೂಳೂರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದಿಗಂತ್, ದಾಮೋದರ ನಾಯ್ಕ, ಯೂಸುಫ್ ಅಜ್ಜಿನಡ್ಕ, ಜುಬೈದಾ ಕಡಂಬು ಇವರಿಗೆ ಧನಸಹಾಯ ಹಾಗೂ ಆಲಂಗಾರು ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ನೀಡಲಾಯಿತು. ಸುಧೀರ್ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಎಸ್ ಪಿ ವರದಿ, ವಾಚಿಸಿ ನಿರೂಪಿಸಿದರು. ಮುಸ್ತಾಫ ಕನ್ಯಾನ ವಂದಿಸಿದರು.



























