ಧರ್ಮಸ್ಥಳ : ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಾಹನಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ನಂದನ ಗೌಡ ಕೆ.ಡಿ., ಹೇಮಂತ್, ಹರ್ಷಿತ್ ಕುಮಾರ್ ಹೆಚ್.ಎಸ್. ಬಂಧಿತರು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಫೆ.15 ರಂದು ಯಮಹ ಕಂಪನಿಯ R15 ಮಾದರಿಯ ಮೋಟಾರ್ ಸೈಕಲ್ (ಅ.ಕ್ರ 09/2024) ಹಾಗೂ ಅದೇ ದಿನ ಯಮಹ ಕಂಪನಿ RX 100 ಮೋಟಾರ್ ಸೈಕಲ್ (ಅ.ಕ್ರ 09/2024) ಕಳ್ಳತನವಾದ ಬಗ್ಗೆ ಹಾಗೂ ಮಾ.1 ರಂದು ಮಾರುತಿ 800 ಕಾರು ಕಳ್ಳತನವಾದ ಬಗ್ಗೆ (ಅ.ಕ್ರ 16/2024) ಪ್ರಕರಣಗಳು ದಾಖಲಾಗಿರುತ್ತದೆ.
ಸದ್ರಿ ಪ್ರಕರಣಗಳ ತನಿಖೆಗಾಗಿ, ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯಂತ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ ಎನ್.ಎಂ ರವರು ಮತ್ತು ರಾಜೇಂದ್ರ ಡಿ.ಎಸ್ ರವರು ಹಾಗೂ ಬಂಟ್ವಾಳ ಡಿ.ವೈಎಸ್.ಪಿ ರವರಾದ ಎಸ್. ವಿಜಯ ಪ್ರಸಾದ್ ರವರ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ವಸಂತರಾಮ ಆಚಾರ್ ರವರ ಮಾರ್ಗದರ್ಶನದಲ್ಲಿ, ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು) ಅನಿಲಕುಮಾರ ಡಿ, ಪಿ.ಎಸ್.ಐ (ತನಿಖೆ) ಸಮರ್ಥ ಗಾಣಿಗೇರ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್, ಹೆಚ್.ಸಿ ರಾಜೇಶ್ ಎನ್, ಹೆಚ್ ಸಿ ಶಶಿಧರ, ಹೆಚ್.ಸಿ ಪ್ರಶಾಂತ, ಹೆಚ್ ಸಿ ಅಸ್ಲಾಂ, ಹೆಚ್‌ಸಿ ಸತೀಶ್ ನಾಯ್ಕ್, ಹೆಚ್ ಸಿ ಕೃಷ್ಣಪ್ಪ, ಮ ಹೆಚ್.ಸಿ ಪ್ರಮೋದಿನಿ, ಪಿ.ಸಿ ಮಲ್ಲಿಕಾರ್ಜುನ, ಪಿಸಿ ಅಭಿಜಿತ್, ಪಿಸಿ ಗೋವಿಂದ ರಾಜ್ ರವರ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿರುತ್ತಾರೆ.
ಆರೋಪಿತರಿಂದ ಕಳವು ಮಾಡಿದ್ದ ಎರಡು ಮೋಟಾರ್ ಸೈಕಲ್, ಸುಜುಕಿ ಜಿಕ್ಸರ್ ಮೋಟಾರ್ ಸೈಕಲ್, ಕಾರು ಸ್ವಾದೀನಪಡಿಸಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ 2,00,000ರೂ ಆಗಬಹುದಾಗಿದೆ.

























