ಪುತ್ತೂರು : ಭಯೋತ್ಪಾದಕ ಚಟುವಟಿಕೆಯ ವಿರುದ್ಧ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಗೆ ಭಾಷಣ ಮಾಡಲೆಂದು ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕರನ್ನು ತುಮಕೂರು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದನ್ನು ಅರುಣ್ ಕುಮಾರ್ ಪುತ್ತಿಲ ಖಂಡಿಸಿದ್ದಾರೆ.
ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಲ್ಲಿಯವರೆಗೆ ತಲುಪಿದೆ ಎಂದರೆ ಭಯೋತ್ಪಾದನೆಯ ವಿರುದ್ದ ಕೂಡ ಮಾತನಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಯಾವುದೇ ಹಿಂದೂವಿಗೂ ಅನ್ಯಾಯವಾದರೂ ನಾವು ಅವರ ಜೊತೆಗಿರುತ್ತೇವೆ ಎಂದು ಅರುಣ್ ಪುತ್ತಿಲ ತಿಳಿಸಿದ್ದಾರೆ.



























