ಪುತ್ತೂರು : ತುಮಕೂರಿನಲ್ಲಿ ಸಂಘಪರಿವಾರದ ಮುಖಂಡ ಮುರಳಿಕೃಷ್ಣ ಹಸಂತಡ್ಕರನ್ನು ಬಂಧಿಸಿದ್ದಕ್ಕೆ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ ಖಂಡನೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ಬಂದ ಮೇಲೆ ಭಯೋತ್ಪಾದನೆಯ ಕರಿನೆರಳು ದಟ್ಟವಾಗಿರುವುದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲಿ ಪಾಕ್ ಪರವಾಗಿ ಘೋಷಣೆ,ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಇವೆಲ್ಲಾ ಘಟನೆಯಿಂದ ರಾಜ್ಯದ ಜನತೆ ಭಯಭೀತರಾಗುವಂತೆ ಮಾಡಿದೆ.
ಜನತೆಗೆ ನೈತಿಕಸ್ಥೈರ್ಯ ತುಂಬಲು ಅಲ್ಪಸಂಖ್ಯಾತರ ಮಿತಿಮೀರಿದ ತುಷ್ಟೀಕರಣಕ್ಕೆ ಕಡಿವಾಣ ಹಾಕಲು ಸಂಘಪರಿವಾರದ ಮುಖಂಡ ಮುರಳೀಕೃಷ್ಣ ಹಸಂತಡ್ಕ ರವರು ತುಮಕೂರಿಗೆ ಪ್ರತಿಭಟನೆಗೆ ತೆರಳುವ ಸಂದರ್ಭದಲ್ಲಿ ಬಂಧಿಸಿರುವುದು ಖಂಡನೀಯ ಹಾಗೂ ಈ ರೀತಿಯ ವರ್ತನೆಯಿಂದ ರಾಜ್ಯ ಸರಕಾರ ಭಯೋತ್ಪಾದನೆಯನ್ನು ಮಾಡುವವರಿಗೆ ಪರೋಕ್ಷವಾಗಿ ಬೆಂಬಲ ನೀಡಿದಾಗೆ ಆಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ ಹೇಳಿದ್ದಾರೆ.



























