ಪುತ್ತೂರು : ಎಸ್.ಕೆ.ಎಸ್.ಎಸ್. ಎಫ್ ಬೆಂಗಳೂರು ಜಿಲ್ಲೆಯ ವಿಖಾಯ ಚೇರ್ಮನ್ ಆಗಿ ಇಬ್ರಾಹಿಂ ಬಾತಿಶಾ ಆತೂರು ಆಯ್ಕೆಯಾಗಿದ್ದಾರೆ.
ಎಸ್.ಕೆ.ಎಸ್.ಎಸ್. ಎಫ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಬಾತಿಶಾ ಆತೂರು ಅವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಅನೇಕ ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಐಬಿ ವೆಲ್ಪೆರ್ ಅಸೋಸಿಯೇಶನ್ (IBWA) ಪುತ್ತೂರು ಅಧ್ಯಕ್ಷರಾಗಿ, ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ನ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಕಡಬ ತಾಲೂಕು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎನ್.ಎಸ್.ಯು.ಐ ಪುತ್ತೂರು ತಾಲೂಕು ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಬಾತಿಶಾ ಆತೂರು ಅವರು ಆತೂರು ಬೈಲ್ ಮದ್ರಸದ ಮಾಜಿ ಅಧ್ಯಕ್ಷರಾದ ಡಿ ಎ ಪುತ್ತುಮೋನು ರವರ ಪುತ್ರ.


























