ಬೆಂಗಳೂರು : ಬಿಜೆಪಿ ಹಾಲಿ ಸಂಸದ ಡಿ.ವಿ ಸದಾನಂದಗೌಡ ಅವರು ಈ ಹಿಂದೆ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಅದಾದ ಬಳಿಕ ಬಿಜೆಪಿ ಕೆಲ ನಾಯಕರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು. ಅದರಂತೆ ನಾನು ನಿವೃತ್ತಿ ಘೋಷಣೆಯನ್ನ ಹಿಂಪಡೆಯುತ್ತೇನೆ ಎಂದಿದ್ದರು.
ಇದೀಗ ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನುವ ಮೂಲಕ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಕ್ಷೇತ್ರದ ಎಲ್ಲ ಶಾಸಕರು, ಮುಖಂಡರು ನೀವೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಇನ್ನೂ ನಾನು ಹತ್ತು ವರ್ಷ ರಾಜಕೀಯದಲ್ಲಿರಬಹುದು. ಒಂದು ವೇಳೆ ನನಗೆ ಟಿಕೆಟ್ ಕೊಡದಿದ್ರೆ, ಸ್ವಲ್ಪ ನೋವಾಗುತ್ತದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ, ಬಿಜೆಪಿ ನನಗೆ ಎಲ್ಲವೂ ಕೊಟ್ಟಿದೆ’ ಎಂದಿದ್ದಾರೆ.



























