ಕಡಬ : ಮಹಿಳೆ ಮೇಲೆ ಹಲ್ಲೆ ನಡೆಸಿರುವ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.10 ರಂದು ಬೆಳಿಗ್ಗೆ ಮಹಿಳೆ ಒಬ್ಬರೆ ಮನೆಯಲ್ಲಿದ್ದ ವೇಳೆ, ನೆರೆಕೆರೆಯ ಸಂಬಂಧಿ ಶಶಿಧರ ಎಂಬಾತ ಮಹಿಳೆಯ ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವುತ್ತಿರುವುದನ್ನು ನೋಡಿ ಮಹಿಳೆ ಅಕ್ಷೇಪಿಸಿರುತ್ತಾರೆ.
ಈ ವೇಳೆ ಶಶಿಧರ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:34/2024 ಕಲಂ:447.427.323.504 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























