ಪುತ್ತೂರು : ಜಮೀನಿನಲ್ಲಿರುವ ಮನೆಯನ್ನು ಜೆಸಿಬಿ ಮೂಲಕ ಕೆಡವಿರುವುದಾಗಿ ವ್ಯಕ್ತಿಯೋರ್ವರು ದೂರು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಪ್ರತಿದೂರು ನೀಡಿದ್ದಾರೆ.
ಸೂತ್ರಬೆಟ್ಟು ನಿವಾಸಿ ಶಶಿಕಲಾ ಪಿ. ವಸಂತ ಪೂಜಾರಿ ಹಾಗೂ ಅವರ ಪತ್ನಿ ವಿರುದ್ಧ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕುರಿಯ ಹೊಸಮಾರು ಎಂಬಲ್ಲಿ ನನ್ನ ಮೂಲ ದಾಖಲೆಯನ್ನು ಹೊಂದಿರುವ ಮನೆಯಿದ್ದು, ತೋಟ ಹಾಗೂ ಹಟ್ಟಿ, ಅಡಿಕೆ ದಾಸ್ತಾನು ಕೋಟೆಯನ್ನು ಹೊಂದಿದ್ದು, ಅಕ್ರಮವಾಗಿ ಪ್ರವೇಶ ಮಾಡಿದ ವಸಂತ ಪೂಜಾರಿ ಮತ್ತು ಜಯಮಾಲಾ, ನನ್ನ ಮೂಲ ದಾಖಲೆಯಲ್ಲಿದ್ದ ಹಟ್ಟಿ, ಅಡಿಕೆ ದಾಸ್ತಾನು ಕೊಠಡಿಯನ್ನು ಕೆಳವಿ ಅಡಿಕೆ ತೆಂಗು ಬಾಳೆ ಕಾಳು ಮೆಣಸು ಅಕ್ರಮವಾಗಿ ತೆಗೆದುಕೊಂಡು ಮಾರಾಟ ಮಾಡಿರುವಂತೆ ಪುತ್ತೂರು ಕೋರ್ಟ್ ಕೇಸ್ ನಲ್ಲಿದೆ.
ವಾಸ್ತವ್ಯದ ಮನೆಯನ್ನು ದುರಸ್ಥಿಗೊಳಿಸಿರುತ್ತಾರೆ. ಹಾಗೂ ನನ್ನ ಸುರ್ಪದಿಯಲ್ಲಿದ್ದ ಮನೆಯನ್ನು ಕೆಡವಿ ಸುವ್ಯವಸ್ಥೆಗೊಳಿಸಲು ತಯಾರಿ ನಡೆಸಿರುತ್ತೇನೆ. ಈ ಸಂದರ್ಭದಲ್ಲಿ ನಕಲಿ ದಾಖಲೆಗಳ ಹೆಸರನ್ನು ಹೇಳಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿರುತ್ತಾರೆ.
ವಸಂತ ಪೂಜಾರಿ ಅವರು ಹಲವು ಜನರಿಗೆ ಮೋಸ ಮಾಡಿತ್ತಾರೆ. ನನ್ನ ಸ್ವಾಧೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡದ ಹಾಗೆ ವಿಚಾರಣೆ ನಡೆಸುವಂತೆ ದೂರಿನಲ್ಲಿ ತಿಳಿಸಿರುತ್ತಾರೆ.



























